ಪ್ಯಾರಿಸ್, ಸೆ. 24(DaijiworldNews/HR): ಐಫೆಲ್ ಟವರ್ ಅನ್ನು ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಕೆ ಕರೆ ಬಂದ ಹಿನ್ನಲೆಯಲ್ಲಿ , ಪ್ರವಾಸಿಗರ ಆಕರ್ಷಣೆಯ ಕೇಂದ್ರ, ಐಫೆಲ್ ಟವರ್ ಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಐಫೆಲ್ ಟವರ್ ಗೆ ಬಾಂಬ್ ಸ್ಫೋಟಿಸುವುದಾಗಿ ಫೋನ್ ಮೂಲಕ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ವ್ಯಾಪಕ ಭದ್ರತೆ ಒದಗಿಸಲಾಗಿದೆ' ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿರುವುದಾಗಿ ವರದಿ ಬಂದಿದೆ.
131 ವರ್ಷ ಇತಿಹಾಸ ಹೊಂದಿರುವ ಟವರ್ ವೀಕ್ಷಣೆಗೆ ಸಾಮಾನ್ಯದಿನಗಳಲ್ಲಿ ನಿತ್ಯವೂ 25,000ಕ್ಕೂ ಅಧಿಕ ಪ್ರವಾಸಿಗರು ಬರುತ್ತಾರೆ. ಇದೀಗ ಕೊರೊನಾ ಕಾರಣದಿಂದ ನಿರ್ಬಂಧ ಹೇರಿರುವುದರಿಂದ ಈ ಬಾರಿ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿದೆ.