ವಾಷಿಂಗ್ಟನ್, ಸೆ 25(DaijiworldNews/PY): ಭಾರತ-ಚೀನಾ ನಡುವೆ ಇರುವ ಗಡಿ ಬಿಕ್ಕಟ್ಟು ವಿಚಾರದ ಇತ್ಯರ್ಥಕ್ಕೆ ಸಹಾಯ ಮಾಡಲು ನಾನು ಸಿದ್ದ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಪ್ರಸ್ತುತ ಭಾರತ-ಚೀನಾ ಈ ಸಂಕಷ್ಟವನ್ನು ಎದುರಿಸುತ್ತಿದೆ ಎನ್ನುವ ವಿಚಾರ ನನಗೆ ತಿಳಿದಿದೆ. ಈ ವಿಚಾರವನ್ನು ಉಭಯ ದೇಶಗಳು ನಿವಾರಿಸಿಕೊಳ್ಳಲಿವೆ ಎನ್ನುವ ವಿಶ್ವಾಸ ನನ್ನಲ್ಲಿದೆ. ಅವರು ಬಯಸಿದ್ದಲ್ಲಿ ನಾನು ಪ್ರೀತಿಯಿಂದ ಅವರಿಗೆ ನೆರವಾಗುತ್ತೇನೆ ಎಂದು ತಿಳಿಸಿದ್ದಾರೆ.
ಗಡಿ ವಿಚಾರವಾಗಿ ಭಾರತ-ಚೀನಾದ ನಡುವೆ ಸೇನ ಹಂತದ ಮಾತುಕತೆ ನಡೆದಿರುವ ಸಂದರ್ಭದಲ್ಲೇ ಟ್ರಂಪ್ ಅವರು ಗಟಿ ಬಿಕ್ಕಟ್ಟು ವಿಚಾರದ ಇತ್ಯರ್ಥಕ್ಕೆ ನಾನು ನೆರವಾಗುತ್ತೇನೆ ಎಂದಿದ್ದಾರೆ.