ಜಿನೇವಾ, ಸೆ 26(DaijiworldNews/PY): ಕೊರೊನಾ ಲಸಿಕೆಯನ್ನು ವ್ಯಾಪಕವಾಗಿ ಬಳಸುವ ಮೊದಲು ಜಗತ್ತಿನಲ್ಲಿ ಮೃತರ ಸಂಖ್ಯೆ 20 ಲಕ್ಷ ದಾಟಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಇದಕ್ಕೆ ಅಂತರಾಷ್ಟ್ರೀಯ ಕ್ರಮ ಕೈಗೊಳ್ಳದೇ ಇದ್ದಲ್ಲಿ ಈ ಸಂಖ್ಯೆಯು ಇನ್ನೂ ಹೆಚ್ಚಾಗಬಹುದು. ಚೀನಾದಲ್ಲಿ ಕೊರೊನಾ ಪ್ರಾರಂಭವಾದ ಒಂಭತ್ತು ತಿಂಗಳ ಬಳಿಕ ಕೊರೊನಾದಿಂದ ಸಾವುಗಳ ಸಂಖ್ಯೆ 10 ಲಕ್ಷ ದಾಟಿದೆ ತಲುಪಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಪರಿಸ್ಥಿತಿ ವಿಭಾಗದ ಮುಖ್ಯಸ್ಥ ಮೈಕ್ ರಿಯಾನ್ ತಿಳಿಸಿದ್ದಾರೆ.
ಹೆಚ್ಚುತ್ತಿರುವ ಕೊರೊನಾ ಸಾವಿನ ಪ್ರಮಾಣವನ್ನು ನಾವು ನಿಯಂತ್ರಿಸದೇ ಇದ್ದಲ್ಲಿ ಅಥವಾ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಇದ್ದಲ್ಲಿ 20 ಲಕ್ಷಕ್ಕೂ ಹೆಚ್ಚು ಸಾವು ಸಂಭವಿಸಲಿದೆ. ವಿಚಾರ ಕೇವಲ ಊಹೆಯಲ್ಲ. ವಾಸ್ತವಿಕ ಸತ್ಯ ಎಂದಿದ್ದಾರೆ.