ವಾಷಿಂಗ್ಟನ್ ,ಸೆ 28 (DaijiworldNews/HR): ಭಾರತ ಮತ್ತು ಚೀನಾ ದೇಶಗಳ ನಡುವೆ ಇರುವ ಗಡಿ ಬಿಕ್ಕಟ್ಟನ್ನು ಉಭಯ ದೇಶಗಳು ಬಗೆಹರಿಸಿಕೊಳ್ಳಲಿವೆ ಎಂದು ಆಶಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಿವಾದ ಇತ್ಯರ್ಥಕ್ಕೆ ನೆರವು ನೀಡಲು ತಾನು ಸಿದ್ಧ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಟ್ರಂಪ್ , ಚೀನಾ ಮತ್ತು ಭಾರತ ಈಗ ಸಂಕಷ್ಟವನ್ನು ಎದುರಿಸುತ್ತಿವೆ ಎಂಬುದು ನನಗೆ ತಿಳಿದಿದೆ. ಅದನ್ನು ಬಗೆಹರಿಸಿಕೊಳ್ಳಲಿವೆ ಎಂಬ ವಿಶ್ವಾಸವೂ ಇದೆ. ಅವರು ಬಯಸಿದರೆ ನಾನು ನೆರವಾಗುತ್ತೇನೆ' ಎಂದು ಹೇಳಿದ್ದಾರೆ.
ಇನ್ನು ಗಡಿಯಲ್ಲಿ ಮೂಡಿರುವ ಉದ್ವಿಗ್ನ ಸ್ಥಿತಿ ಬಗೆಹರಿಸಲು ಚೀನಾ-ಭಾರತ ನಡುವಣ ಸೇನಾ ಹಂತದ ಮಾತುಕತೆ ನಡೆದಿರುವ ಹೊತ್ತಿನಲ್ಲಿಯೇ ಟ್ರಂಪ್ ಅವರ ಈ ಹೇಳಿಕೆ ಹೊರಬಂದಿದೆ.