ಕ್ಯಾಲಿಫೋರ್ನಿಯಾ, ಸೆ 30(DaijiworldNews/PY): ಕೊರೊನಾದಿಂದ ಬಿಕ್ಕಟ್ಟು ಎದುರಾಗಿರುವ ಹಿನ್ನೆಲೆ ಅಮೇರಿಕಾದಲ್ಲಿನ ಥೀಮ್ ಪಾರ್ಕ್ನಲ್ಲಿ ಸುಮಾರು 28,000 ಸಿಬ್ಬಂದಿಗಳನ್ನು ಕೆಲಸದಿಂದ ವಜಾಗೊಳಿಸುವುದಾಗಿ ಡಿಸ್ನಿ ತಿಳಿಸಿದೆ.
ಈ ಕ್ರಮವನ್ನು ತೆಗೆದುಕೊಳ್ಳುವುದರಿಂದ ಘಾಸಿಯಾಗಿದೆ. ಕೊರೊನಾದಿಂದ ಉಂಟಾದ ಬಿಕ್ಕಟ್ಟಿನ ಹಿನ್ನೆಲೆ ಉದ್ಯಮದ ಮೇಲೆ ಹೊರೆಯಾಗಿದೆ. ಹಾಗಾಗಿ ಈ ತೀರ್ಮಾನವನ್ನು ಕೈಗೊಳ್ಳಬೇಕಾಗಿದೆ. ಅಲ್ಲದೇ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳವುದು ಕೂಡಾ ಮುಖ್ಯವಾಗಿದೆ. ಹಾಗಾಗಿ ಸಿಬ್ಬಂದಿಗಳ ಸಂಖ್ಯೆಯನ್ನು ಕೂಡಾ ಕಡಿಮೆ ಮಾಡಬೇಕಿದೆ ಎಂದು ಡಿಸ್ನಿ ಪಾರ್ಕ್ನ ಮುಖ್ಯಸ್ಥ ಜೋಶ್ ಡಿ ಅಮೆರೊ ಹೇಳಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಥೀಮ್ ಪಾರ್ಕ್ನಲ್ಲಿ ಸುಮಾರು 28,000 ನೌಕರರನ್ನು ಅಥವಾ ನಾಲ್ಕನೇ ಒಂದು ಭಾಗದಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುವುದಾಗಿ ಕಂಪೆನಿ ಹೇಳಿದೆ.
ಕೊರೊನಾದ ಮೊದಲು ಕ್ಯಾಲಿಫೋರ್ನಿಯಾ ಹಾಗೂ ಫ್ಲೋರಿಡಾದಲ್ಲಿ ಡಿಸ್ನಿ ಥೀಮ್ ಪಾರ್ಕ್ಗಳಲ್ಲಿ ಸುಮಾರು 1,10,000 ಮಂದಿ ಕೆಲಸ ಮಾಡುತ್ತಿದ್ದರು. ಆದರೆ, ಇದಿಗ ನೂತನವಾಗಿ ಘೋಷಣೆಯಾದ ಉದ್ಯೋಗ ಕಡಿತದ ಬಳಿಕ ಆ ಪ್ರಮಾಣವನ್ನು ಸುಮಾರು 82,000ಕ್ಕೆ ಇಳಿಕೆಯಾಗಲಿದೆ.
ಜುಲೈ ತಿಂಗಳ ನಡುವೆ ಫ್ಲೋರಿಡಾಸ ವಾಲ್ಟ್ ಡಿಸ್ನಿ ವರ್ಲ್ಡ್ ಭಾಗಶಃ ಪುನಃ ತೆರೆಯಲ್ಪಟ್ಟಿತ್ತು. ಆದರೆ, ಕೊರೊನಾ ಹಿನ್ನೆಲೆ ಪಾರ್ಕ್ಗೆ ಕಡಿಮೆ ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಿದ್ದರು.
ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಪ್ರಕಾರ, ಅಮೇರಿಕಾದಲ್ಲಿ ಸುಮಾರು 71,80,411 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 2,05,774 ಮಂದಿ ಸಾವನ್ನಪ್ಪಿದ್ದಾರೆ.