ಲಂಡನ್ , ಅ.01 (DaijiworldNews/HR): ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ನ್ಯೂನ್ಹ್ಯಾಮ್ ಕಾಲೇಜಿನ ಪ್ರಾದ್ಯಾಪಕಿ ಡಾ.ಮನಾಲಿ ದೇಸಾಯಿ ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.
ಯುನೈಟೆಡ್ ಕಿಂಗ್ಡಮ್ ವಿಶ್ವವಿದ್ಯಾನಿಕಯವೊಂದರ ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥೆಯಾಗಿ ಅಧಿಕಾರ ವಹಿಸಿಕೊಂಡ ಮೊದಲಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಮನಾಲಿ ದೇಸಾಯಿ ಪಾತ್ರವಾಗಿದ್ದಾರೆ.
ದೇಸಾಯಿಯವರು ಸಾಮಾಜಿಕ ಚಳುವಳಿಗಳು, ಜನಾಂಗೀಯ ಮತ್ತು ಲಿಂಗಭೇದದ ಹಿಂಸಾಚಾರ ಮತ್ತು ವಸಾಹತೋತ್ತರಅಧ್ಯಯನಗಳ ಮೇಲೆ ಸಾಕಷ್ಟು ಸಂಶೋಧನೆ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ದೇಸಾಯಿ, ಸಮಾಜಶಾಸ್ತ್ರವು ನಮ್ಮ ಸುತ್ತಲಿನ ಪ್ರಪಂಚವನ್ನುಅರಿತುಕೊಳ್ಳಲು ಸಾಧ್ಯವಾಗುವ ಸಾಧನಗಳನ್ನು ನೀಡುತ್ತದೆ ಮತ್ತು ಆದ್ದರಿಂದ ಇಂತಹ ಕಠಿಣ ಅವಧಿಯಲ್ಲಿ ಇಲಾಖೆಯ ಮುಖ್ಯಸ್ಥ ಹುದ್ದೆ ಸಿಕ್ಕಿದ್ದು ಉತ್ತಮ ಅವಕಾಶವಾಗಿದೆ ಎಂದು ಹೇಳಿದ್ದಾರೆ.