ಕಾಬೂಲ್, ಅ.01 (DaijiworldNews/HR): ಆತ್ಮಾಹುತಿ ಕಾರು ಬಾಂಬ್ ದಾಳಿಯಲ್ಲಿ ಒಂಬತ್ತು ಮಂದಿ ಮೃತಪಟ್ಟ ಘಟನೆ ಅಫ್ಗಾನಿಸ್ತಾನದ ದಕ್ಷಿಣ ಭಾಗದಲ್ಲಿ ಮಿಲಿಟರಿ ಚೆಕ್ ಪಾಯಿಂಟ್ ಬಳಿ ನಡೆದಿದೆ.
ಈ ಘಟನೆ ನಹ್ರಿ ಸಾರಾ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದ್ದು, ಭದ್ರತಾ ಪಡೆಯ ಮೂವರು ಸಿಬ್ಬಂದಿ ಹಾಗೂ ಮಗು ಗಾಯಗೊಂಡಿದ್ದಾರೆ ಎಂದು ಹೆಲ್ಮಂಡ್ ಪ್ರಾಂತ್ಯದ ಗವರ್ನರ್ ಅವರ ವಕ್ತಾರ ಒಮರ್ ತಿಳಿಸಿದ್ದಾರೆ.
ಇನ್ನು ಚೆಕ್ ಪಾಯಿಂಟ್ ಬಳಿ ವಾಹನ ಸಾಗುತ್ತಿದ್ದಾಗ ದಾಳಿ ನಡೆದಿದ್ದು, ಮೃತಪಟ್ಟವರಲ್ಲಿ ಇಬ್ಬರು ಮಹಿಳೆಯರೂ ಸೇರಿದ್ದಾರೆ ಎಂದು ಅವರು ಹೇಳಿದ್ದಾರೆ.
ದಾಳಿಯ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ. ಆದರೆ ಹೆಲ್ಮಂಡ್ ಪ್ರಾಂತ್ಯದ ಬಹುತೇಕ ಭಾಗ ತಾಲಿಬಾನ್ ಉಗ್ರರ ನಿಯಂತ್ರಣದಲ್ಲಿದೆ ಎನ್ನಲಾಗಿದೆ.