ಸ್ಟಾಕ್ಹೋಮ್, ಅ.5 (DaijiworldNews/HR): ಈ ವರ್ಷದ ವೈದ್ಯಕೀಯ ನೊಬೆಲ್ ಪ್ರಶಸ್ತಿ ಪುರಸ್ಕೃತರನ್ನು ಪ್ರಕಟಿಸಲಾಗಿದ್ದು,'ಹೆಪಟೈಟಿಸ್ ಸಿ ವೈರಸ್' ಪತ್ತೆಗಾಗಿ ಹಾರ್ವೆ ಜೆ.ಆಲ್ಟರ್, ಮೈಕೆಲ್ ಹೊವನ್ ಹಾಗೂ ಚಾರ್ಲ್ಸ್ ಎಂ.ರೈಸ್ ಅವರಿಗೆ ಪ್ರಶಸ್ತಿ ಘೋಷಿಸಲಾಗಿದೆ.
ಹೆಪಟೈಟಿಸ್ ಸಿ ವೈರಸ್ ಅನ್ನು ಶಮನಗೊಳಿಸುವುದು ಈ ಮೂರು ವಿಜ್ಞಾನಿಗಳ ಸಂಶೋಧನೆಗಳಿಂದ ಸಾಧ್ಯವಾಗಿದೆ. ಹೆಪಟೈಟಿಸ್ ಸಿ ವೈರಸ್ ಕುರಿತು ಪತ್ತೆಯಾದ ನಂತರದಲ್ಲಿ ಅದಕ್ಕೆ ಅಗತ್ಯವಿರುವ ರಕ್ತ ಪರೀಕ್ಷೆಗಳು ಹಾಗೂ ಹೊಸ ಔಷಧಿಗಳ ಅಭಿವೃದ್ಧಿಯಿಂದಾಗಿ ಲಕ್ಷಾಂತರ ಜನರ ಜೀವ ಉಳಿದಿದೆ.
ಈ ನೊಬೆಲ್ ಪ್ರಶಸ್ತಿಯು ಚಿನ್ನದ ಪದಕ ಮತ್ತು 10 ಮಿಲಿಯನ್ ಸ್ಪೀಡಿಶ್ ಕ್ರೊನಾ ಒಳಗೊಂಡಿರುತ್ತದೆ. ಕೊರೊನಾ ವೈರಸ್ ಸೋಂಕಿನಿಂದ ಇಡೀ ಜಗತ್ತು ಪರಿಣಾಮ ಎದುರಿಸುತ್ತಿರುವ ಸಮಯದಲ್ಲಿ ವೈದ್ಯಕೀಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ವಿಶೇಷ ಗಮನ ಸೆಳೆದಿದೆ.