ವಾಷಿಂಗ್ಟನ್, ಅ. 06 (DaijiworldNews/HR): ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ನಾಲ್ಕು ದಿನಗಳಿಂದ ಕೊರೊನಾ ಸೋಂಕಿಗೆ ಒಳಗಾಗಿ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಿನ್ನೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬಳಿಕ ಶ್ವೇತ ಭವನಕ್ಕೆ ಬಂದ ತಕ್ಷಣ ಮಾಸ್ಕ್ ತೆಗೆದ ಅವರು, ಶೀಘ್ರವೇ ಪ್ರಚಾರಕ್ಕೆ ಮರಳುವುದಾಗಿ ಘೋಷಿಸಿದ್ದಾರೆ.
ಟ್ರಂಪ್ ಶ್ವೇತಭವನಕ್ಕೆ ಬರುವಾಗ ದೈಹಿಕವಾಗಿ ಸದೃಢರಾಗಿರುವಂತೆ ತೋರಿಸಿಕೊಳ್ಳುವ ಪ್ರಯತ್ನ ನಡೆಸಿದ್ದು,ಈ ಮಧ್ಯೆ ಟ್ವೀಟ್ಗಳನ್ನು ಮಾಡಿದ್ದು, ಅವುಗಳಲ್ಲಿ ರಾಜಕೀಯವೇ ಪ್ರಧಾನವಾಗಿತ್ತು. ಶೀಘ್ರವೇ ಪ್ರಚಾರಕ್ಕೆ ಹಿಂದಿರುಗುವುದಾಗಿ ಒಂದು ಟ್ವೀಟ್ನಲ್ಲಿ ಹೇಳಿದ್ದು, ಕೊರೊನಾಗೆ ಯಾರೂ ಭಯಪಡಬೇಡಿ ಎಂದು ಮತ್ತೊಂದು ಟ್ವೀಟ್ನಲ್ಲಿ ಹೇಳಿದ್ದರು.
ಇನ್ನು ಟ್ರಂಪ್ ಇದಕ್ಕೂ ಮೊದಲು ಟ್ವೀಟ್ ಮಾಡಿರುವ ಟ್ರಂಪ್, ಅಮೇರಿಕಾನ್ನರು ಭಯಪಡಬೇಕಿಲ್ಲ ಎಂದು ಹೇಳಿದ್ದರು, ಆದರೆ ಈ ವರೆಗೆ ಅಮೇರಿಕಾದಲ್ಲಿ 2,10,000 ಮಂದಿ ಕೊರೊನಾ ವೈರಸ್ಗೆ ಪ್ರಾಣ ಕಳೆದುಕೊಂಡಿದ್ದಾರೆ.