ಅಮೇರಿಕಾ, ಅ. 09(DaijiworldNews/PY): ಅಮೇರಿಕಾ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆ, ಮತದಾರರ ಮೇಲೆ ಪ್ರಭಾವ ಬೀರುವ ಸಲುವಾಗಿ ಸೃಷ್ಟಿ ಮಾಡಿದ್ದ ಸುಮಾರು 276 ನಕಲಿ ಖಾತೆಗಳನ್ನು ಫೇಸ್ಬುಕ್ ರದ್ದುಗೊಳಿಸಿದೆ.
ಟರ್ನಿಂಗ್ ಪಾಯಿಂಟ್ ಆಕ್ಷನ್ ಎನ್ನುವ ಸಂಸ್ಥೆಯು ಟ್ರಂಪ್ ಪರ ಪೋಸ್ಟ್ ಮಾಡಲು ಯುವ ಸಮುದಾಯವನ್ನು ಬಳಸಿಕೊಳ್ಳುತ್ತಿದೆ. ಅಲ್ಲದೇ, ಅವರಿಗೆ ಹಣವನ್ನು ಕೂಡ ನೀಡುತ್ತಿದೆ. ಈ ರೀತಿಯಾದ ಕ್ರಮ ಫೇಸ್ಬುಕ್ ನಿಯಮಗಳಿಗೆ ವಿರುದ್ದವಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿತ್ತು.
ಈ ಖಾತೆಗಳನ್ನು ತೆರೆದಿದ್ದ ಅರಿಜೊನಾ ಮೂಲದ ರ್ಯಾಲಿ ಫೋರ್ಜ್ ಡಿಜಿಟಲ್ ಸಂವಹನ ಸಂಸ್ಥೆಯನ್ನು ಶಾಶ್ವತವಾಗಿ ನಿಷೇಧಿಸಲಾಗಿದೆ ಎಂದು ಫೇಸ್ಬುಕ್ ಹೇಳಿದೆ.
ಸದ್ಯ ನಿರ್ಬಂಧಿಸಲಾದ ಅರಿಜೊನಾ ಮೂಲದ ರ್ಯಾಲಿ ಫೋರ್ಜ್ ಡಿಜಿಟಲ್ ಸಂವಹನ ಸಂಸ್ಥೆಯು 2018ರ ಮಧ್ಯಂತರ ಚುನಾವಣೆಯ ಮುಂಚಿತವಾಗಿ ಸಕ್ರಿಯವಾಗಿತ್ತು.