ವಾಷಿಂಗ್ಟನ್, ಅ. 10 (DaijiworldNews/HR) : ಭಾರತದ ಉತ್ತರ ಗಡಿಯಲ್ಲಿ ಚೀನಾ ಇದೀಗ 60 ಸಾವಿರ ಸೈನಿಕರನ್ನು ನಿಯೋಜಿಸಿದೆ ಎಂದು ಅಮೇರಿಕಾದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ತಿಳಿಸಿದ್ದಾರೆ.
ಸಾಂಧರ್ಭಿಕ ಚಿತ್ರ
ಭಾರತದ ಗಡಿಯಲ್ಲಿ ಸೈನಿಕರನ್ನು ನಿಯೋಜಿಸುತ್ತಿರುವ ಚೀನಾ ವಿರುದ್ಧ ವಾಗ್ದಾಳಿ ನಡೆಸಿರುವ ಅಮೆರಿಕ, ಇದೊಂದು ಕೆಟ್ಟ ನಡವಳಿಕೆ ಮತ್ತು ಕ್ವಾಡ್ ದೇಶಗಳಿಗೆ ಬೆದರಿಕೆಯನ್ನೊಡ್ಡುವ ತಂತ್ರಗಾರಿಕೆಯಾಗಿದೆ ಎಂದು ಆರೋಪಿಸಿದೆ.
ಟೋಕಿಯೊದಲ್ಲಿ ಜಪಾನ್, ಭಾರತ ಮತ್ತು ಆಸ್ಟ್ರೇಲಿಯಾದ ವಿದೇಶಾಂಗ ಸಚಿವರ ಜತೆ ನಡೆದ ಸಭೆಯಲ್ಲಿ ಮೈಕ್ ಪಾಂಪಿಯೊ ಪಾಲ್ಗೊಂಡಿದ್ದರು. ಪೂರ್ವ ಲಡಾಖ್ನಲ್ಲಿನ ವಾಸ್ತವ ನಿಯಂತ್ರಣ ರೇಖೆ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಸೇನೆ ಆಕ್ರಮಣಕಾರಿಯಾಗಿ ವರ್ತಿಸಿದ ಬಳಿಕ ಈ ಸಭೆ ನಡೆದಿದ್ದರಿಂದ ಮಹತ್ವ ಪಡೆದಿತ್ತು. ವಾಷಿಂಗ್ಟನ್ಗೆ ಹಿಂತಿರುಗಿದ ಬಳಿಕ ಶುಕ್ರವಾರ ಪಾಂಪಿಯೊ ಈ ಹೇಳಿಕೆ ನೀಡಿದ್ದಾರೆ.