ವಾಷಿಂಗ್ಟನ್, ಅ. 12 (DaijiworldNews/HR): ಕೊರೊನಾ ವೈರಸ್ ರೋಗನಿರೋಧಕ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನಾನು ಕೊರೊನಾ ರೋಗನಿರೋಧಕನೆಂಬಂತೆ ತೋರುತ್ತಿದೆ. ನನ್ನೊಳಗಿನ ರೋಗ ಪ್ರತಿರೋಧವು ದೀರ್ಘಕಾಲೀನವಾಗಬಹುದು, ಅಲ್ಪಕಾಲೀನವಾಗಿರಬಹುದು, ಅಥವಾ ಶಾಶ್ವತವಾಗಿರಬಹುದು ಇದರ ಬಗ್ಗೆ ನನಗೆ ತಿಳಿದಿಲ್ಲ. ಯಾರಿಗೂ ಗೊತ್ತಿಲ್ಲ ಆದರೆ ನಾನು ಮಾತ್ರ ಕೊರೊನಾಗೆ ಪ್ರತಿರೋಧಕ ಹೊಂದಿದ್ದೇನೆ ಎಂದರು.
ಇನ್ನು ಇತ್ತೀಚೆಗೆ ಕೊರೊನಾಗೆ ಒಳಗಾಗಿದ್ದ ಡೊನಾಲ್ಡ್ ಟ್ರಂಪ್, ಮೂರು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ. ಆಸ್ಪತ್ರೆಯಿಂದ ಶ್ವೇತಭವನಕ್ಕೆ ಬಂದ ತಕ್ಷಣವೇ ಮಾಸ್ಕ್ ತೆಗೆದು ವಿವಾದವನ್ನೂಕೂಡ ಸೃಷ್ಟಿಸಿದ್ದರು.
ಕೊರೊನಾ ರೋಗ ನಿರೋಧಕಗಳ ಮಿಶ್ರಿತ ಲಸಿಕೆಯನ್ನು ಅಮೆರಿಕದ ಬಯೋಟೆಕ್ನಾಲಜಿ ಕ್ಷೇತ್ರದ ದಿಗ್ಗಜ ಕಂಪನಿ ರಿಜೆನರಾನ್ ತಯಾರಿಸಿರುವ (ಆರ್ಇಜಿಎನ್-ಸಿಒವಿ2) ಕೊರೊನಾ ಲಸಿಕೆ ಯಶಸ್ವಿಯಾಗಿ ನಿಯಂತ್ರಿಸುವ ಬಗ್ಗೆ ಅಧ್ಯಯನಗಳು ಖಚಿತಪಡಿಸಿವೆ. ಇತ್ತೀಚೆಗೆ ಕೊರೊನಾ ಸೋಂಕಿಗೆ ತುತ್ತಾಗಿದ್ದ ಡೊನಾಲ್ಡ್ ಟ್ರಂಪ್ ಅವರು ಕೂಡ ಪ್ರಾಯೋಗಿಕ ಹಂತದಲ್ಲಿರುವ ಈ ಲಸಿಕೆಯನ್ನು ಪಡೆದಿದ್ದರು ಎಂದು ತಿಳಿದು ಬಂದಿದೆ.