ಇಸ್ಲಾಮಾಬಾದ್,ಅ. 12 (DaijiworldNews/HR): ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಬದಿನ್ ಜಿಲ್ಲೆಯಲ್ಲಿರುವ ಹಿಂದೂ ದೇವಾಲಯವನ್ನು ಕಿಡಿಗೇಡಿಗಳು ಧ್ವಂಸ ಮಾಡಿದ ಘಟನೆ ನಡೆದಿದ್ದು ಓರ್ವನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಹಿಂದೂ ದೇವಾಲಯದ ಮೂರ್ತಿಗಳನ್ನು ಮೊಹಮ್ಮದ್ ಇಸ್ಮಾಯಿಲ್ ಎಂಬ ವ್ಯಕ್ತಿ ಧ್ವಂಸ ಮಾಡಿದ್ದಾನೆ ಎಂಬುದಾಗಿ ಅಶೋಕ್ ಕುಮಾರ್ ಎಂಬವರು ಪೊಲೀಸರಿಗೆ ದೂರು ನೀಡಿದ್ದರು.
ಇನ್ನು ಈ ಘಟನೆ ಶನಿವಾರ ನಡೆದಿದ್ದು ಪೊಲೀಸರು ಕೇಸು ದಾಖಲಿಸಿ ಓರ್ವನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಯು ಮಾನಸಿಕ ಸ್ಥಿರತೆ ಇದ್ದು, ಉದ್ದೇಶಪೂರ್ವಕವಾಗಿ ದೇವರ ಮೂರ್ತಿಗಳನ್ನು ಧ್ವಂಸ ಮಾಡಿದ್ದಾನೆಯೇ ಎಂದು ಪೊಲೀಸರು ತನಿಖೆ ಮಾಡುತ್ತಿದ್ದಾರೆ.