ನ್ಯೂಯಾರ್ಕ್, ಅ. 13 (DaijiworldNews/MB) : ''ಡಿಸೆಂಬರ್ ಅಂತ್ಯ ಅಥವಾ ಬರುವ ವರ್ಷ ಕೊರೊನಾ ಲಸಿಕೆ ಲಭ್ಯವಾಗುವ ನಿರೀಕ್ಷೆಯಿದೆ'' ಎಂದು ವಿಶ್ವ ಆರೋಗ್ಯ ಸಂಘಟನೆಯ ಮುಖ್ಯ ವಿಜ್ಞಾನಿ ಹಾಗೂ ಭಾರತೀಯ ಮೂಲದ ಸೌಮ್ಯ ಸ್ವಾಮಿನಾಥನ್ ತಿಳಿಸಿದ್ದಾರೆ.
ಕೊರೊನಾ ಲಸಿಕೆಗಳ ಬೆಳವಣಿಗೆಯ ಬಗ್ಗೆ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ''ವಿಶ್ವದಾದ್ಯಂತ ಸುಮಾರು 40 ಲಸಿಕೆಗಳ ಕ್ಲಿನಿಕಲ್ ಪ್ರಯೋಗ ನಡೆಯುತ್ತಿದೆ. ಇದು ಬೇರೆ ಬೇರೆ ಹಂತದಲ್ಲಿದ್ದು ಅಂತಿಮ ಹಂತಕ್ಕೆ ಇನ್ನೂ ಬಂದಿಲ್ಲ. ಈ 40 ಲಸಿಕೆಗಳ ಪೈಕಿ 10 ಲಸಿಕೆಗಳ ಕ್ಲಿನಿಕಲ್ ಪರೀಕ್ಷೆ ಮೂರನೇ ಹಂತದಲ್ಲಿದ್ದು ಈ ಲಸಿಕೆಗಳ ಸಾಮರ್ಥ್ಯ ಮತ್ತು ಸುರಕ್ಷತೆಯ ಬಗ್ಗೆ ಪರಿಶೀಲನೆ ನಡೆಸಿ ಮಾನವ ಬಳಕೆಗೆ ಅವಕಾಶ ನೀಡಲಾಗುತ್ತದೆ'' ಎಂದು ಹೇಳಿದ್ದಾರೆ.