ಅಫ್ಗಾನಿಸ್ತಾನ, ಅ. 13 (DaijiworldNews/PY): ಅಮೇರಿಕಾದ ಪಡೆಗಳು ಅಫ್ಗಾನಿಸ್ತಾನದ ಭದ್ರತಾ ಪಡೆಗಳು ಬೆಂಬಲದೊಂದಿಗೆ ದಕ್ಷಿಣ ಹೆಲ್ಮಂಡ್ ಪ್ರಾಂತ್ಯದಲ್ಲಿ ತಾಲಿಬಾನ್ನ ಮೇಲೆ ಹಲವಾರು ಬಾರಿ ದಾಳಿ ನಡೆಸಿವೆ ಎಂದು ಅಮೇರಿಕಾ ಸೇನಾ ವಕ್ತಾರರು ತಿಳಿಸಿದ್ದಾರೆ.
ಫೆಬ್ರವರಿಯಲ್ಲಿ ಅಮೇರಿಕಾ-ತಾಲಿಬಾನ್ ನಡುವೆ ಆಗಿದ್ದ ಒಪ್ಪಂದಕ್ಕೆ ಇತ್ತೀಚೆಗೆ ಹೆಲ್ಮೆಂಡ್ನಲ್ಲಿ ಇತ್ತೀಚೆಗೆ ನಡೆದ ದಾಳಿಗಳು ವಿರುದ್ದವಾಗಿದ್ದವು. ಅಲ್ಲದೇ, ಶಾಂತಿ ಮಾತುಕತೆಯ ಮೇಲೂ ಇದು ಪರಿಣಾಮ ಬೀರಿದೆ. ಈಗ ನಡೆದ ವಾಯುದಾಳಿಯಿಂದ ಫೆಬ್ರವರಿಯಲ್ಲಿ ನಡೆದ ಒಪ್ಪಂದದ ಉಲ್ಲಂಘನೆಯಾಗಿಲ್ಲ ಎಂದು ಕರ್ನಲ್ ಸಾನ್ನಿ ಲೆಜೆಟ್ ಅವರು ಹೇಳಿದ್ದಾರೆ.
ತಾಲಿಬಾನ್ ಹೆಲ್ಮೆಂಡ್ ಪ್ರಾಂತ್ಯಲ್ಲಿ ನಡೆಸಿರುವ ಆಕ್ರಮಣಕಾರಿ ದಾಳಿಯನ್ನು ಕೂಡಲೇ ನಿಲ್ಲಿಸಬೇಕು. ಅವರು ಮಾಡುವ ಹಿಂಸಾಚಾರನ್ನು ಕೂಡಾ ಕಡಿಮೆ ಮಾಡಬೇಕು ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ತಾಲಿಬಾನ್ ದಾಳಿಗೆ ಒಳಗಾದ ಅಫ್ಗಾನ್ ರಾಷ್ಟ್ರೀಯ ಭದ್ರತಾ ಪಡೆಗಳ ರಕ್ಷಣೆಗೆ ಅಮೇರಿಕಾದ ಪಡೆಗಳು ಬೆಂಬಲ ನೀಡುತ್ತಲೇ ಇರುತ್ತವೆ ಎಂದು ಲೆಜೆಟ್ ಹೇಳಿದ್ದಾರೆ.