ಬೀಜಿಂಗ್, ಅ. 15 (DaijiworldNews/PY): ಯುದ್ದದ ಕಡೆ ಗಮನ ನೀಡುವಂತೆ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಹೇಳಿದ್ದಾರೆ ಎಂದು ವರದಿಯಾಗಿದೆ.
ದಕ್ಷಿಣ ಪ್ರಾಂತ್ಯದ ಗುವಾಂಗ್ಡಾಂಗ್ನ ಮಿಲಿಟರಿ ನೆಲೆಗೆ ಭೇಟಿ ನೀಡಿದ ಸಂದರ್ಭ ಮಾತನಾಡಿದ ಅವರು, ಸೈನಿಕರಿಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಹಾಗೂ ಯುದ್ದದ ಸಿದ್ದತೆಗಳತ್ತ ಗಮನ ನೀಡುವಂತೆ ತಿಳಿಸಿದ್ದಾರೆ.
ಕೌಶಲ್ಯಗಳನ್ನು ಹೆಚ್ಚಿಸುವ ಸಲುವಾಗಿ ವಾಸ್ತವಿಕ ಯುದ್ದ ತರಬೇತಿಯನ್ನು ಮಾಡಬೇಕು. ಯುದ್ದ ಸಿದ್ದಾಂತಗಳು ಹಾಗೂ ತರಬೇತಿ ವಿಧಾನಗಳಲ್ಲಿ ಹೊಸತನವನ್ನು ಸಾಧಿಸಲು ತಯಾರು ನಡೆಸಬೇಕು ಎಂದಿದ್ದಾರೆ.
ಸಮುದ್ರ ತೀರದ ಮರೀನ್ ಕಾರ್ಪ್ಸ್ ಕೇಂದ್ರ ಕಚೇರಿಗೆ ಮೊದಲು ಭೇಟಿ ನೀಡಿದ ಅವರು, ಚೀನಾದ ಸಾಗರೋತ್ತರ ಹಿತಾಸಕ್ತಿ, ದೇಶದ ಭದ್ರತೆ ಹಾಗೂ ಏಕತೆಯನ್ನು ಕಾಪಾಡುವ ಹೊಣೆಯು ಕಡಲ ತೀರದ ಸೇನೆಯ ಕಾರ್ಯವಾಗಿದೆ ಎಂದು ಹೇಳಿದ್ದಾರೆ.