ವಾಷಿಂಗ್ಟನ್,ಅ. 17 (DaijiworldNews/HR): ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಅವರ ಪರ ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಪ್ರಚಾರ ನಡೆಸಲಿದ್ದಾರೆ.
ಒಬಾಮಾ ಅಮೇರಿಕಾದ ಅಧ್ಯಕ್ಷರಾಗಿದ್ದ ಸಮಯದಲ್ಲಿ ಉಪ ಅಧ್ಯಕ್ಷರಾಗಿ ಬಿಡೆನ್ ಸೇವೆ ಸಲ್ಲಿಸಿದ್ದು, ಭಾರತೀಯ ಮೂಲದ ಸೆನೆಟರ್ ಕಮಲಾ ಹ್ಯಾರಿಸ್ ಪರ ಆನ್ ಲೌನ್ ಪ್ರಚಾರ ನಡೆಸಲು ಒಬಮಾ ಅನುಮತಿ ನೀಡಿದ್ದಾರೆ.
ಇನ್ನು ಒಬಾಮಾ ಅವರ ಭಾಷಣ ಕೌಶಲ ಪ್ರತಿಪಕ್ಷ ಡೆಮಾಕ್ರಟಿಕ್ ನತ್ತ ಹೆಚ್ಚಿನ ಸಂಖ್ಯೆಯ ಜನರನ್ನು ಆಕರ್ಷಿಸುತ್ತಿದೆ ಹಾಗಾಗಿ ಜೋ ಬಿಡೆನ್ ಮತ್ತು ಕಮಲಾ ಹ್ಯಾರಿಸ್ ಪರ ಪ್ರಚಾರ ನಡೆಸಲಿದ್ದಾರೆ ಎಂದು ಬಿಡೆನ್ ಪರ ಪ್ರಚಾರಕರು ತಿಳಿಸಿದ್ದಾರೆ.