ನ್ಯೂಯಾರ್ಕ್, ಅ. 19 (DaijiworldNews/MB) : ಅಮೇರಿಕಾ ಅಧ್ಯಕ್ಷ ಸ್ಥಾನದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಅವರು ಅಧ್ಯಕ್ಷರಾದರೆ ಭಾರತಕ್ಕೆ ಒಳ್ಳೆಯದಾಗುವುದಿಲ್ಲ. ಅವರು ಚೀನಾ ಪರವಾಗಿ ನಿಲ್ಲಬಹುದು ಎಂದು ಪ್ರಸ್ತುತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರ ಉದ್ಯಮಿ ಡೊನಾಲ್ಡ್ ಟ್ರಂಪ್ ಜ್ಯೂನಿಯರ್ ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಜ್ಯೂನಿಯರ್ ಅವರು ಪ್ರಕಟಿಸಿರುವ ಜೋ ಬಿಡೆನ್ ಹಾಗೂ ಅವರ ಕುಟುಂಬದ ಭ್ರಷ್ಟಾಚಾರದ ಬಗ್ಗೆಗಿನ ಪುಸ್ತಕದ ಯಶಸ್ಸಿನ ಆಚರಣೆಗಾಗಿ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೋ ಬಿಡೆನ್ ಅವರು ಅಧ್ಯಕ್ಷರಾದರೆ ಭಾರತಕ್ಕೆ ಒಳ್ಳೆಯದಾಗುವುದಿಲ್ಲ. ಅವರು ಚೀನಾ ಕಡೆ ಒಲವು ತೋರಬಹುದು. ನಾವೆಲ್ಲರೂ ಚೀನಾದ ಬೆದರಿಕೆಯನ್ನು ಈ ಸಂದರ್ಭದಲ್ಲಿ ಮನಗಾಣಬೇಕು. ಪ್ರಾಯಶಃ ಈ ವಿಚಾರದ ಬಗ್ಗೆ ಭಾರತೀಯ–ಅಮೆರಿಕನ್ನರಿಗಿಂತ ಹೆಚ್ಚಾಗಿ ಬೇರೆ ಯಾರಿಗೂ ತಿಳಿದಿರಲಾರದು ಎಂದು ಹೇಳಿದ್ದಾರೆ.
ಇನ್ನು ಈ ಸಂದರ್ಭದಲ್ಲೇ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅತ್ಯುತ್ತಮ ಬಾಂಧವ್ಯ ಹೊಂದಿದ್ದಾರೆ ಎಂದು ಹೇಳಿದ ಟ್ರಂಪ್ ಜ್ಯೂನಿಯರ್, ಭಾರತ ಹಾಗೂ ಅಮೇರಿಕಾ ಸೋಶಿಯಲಿಸಂ ಮತ್ತು ಕಮ್ಯೂನಿಸಂ ವಿರುದ್ಧದ ಹೋರಾಟದಲ್ಲಿ ಜೊತೆಯಾಗಬೇಕೆಂಬುದನ್ನು ಈ ಎರಡು ದೇಶಗಳ ನಾಯಕರ ಭಾವನೆಯಾಗಿದೆ ಎಂದು ಹೇಳಿದ್ದಾರೆ.