ವಾಷಿಂಗ್ಟನ್, ಅ. 20 (DaijiworldNews/HR): ಸುಡಾನ್ ನನ್ನು ಭಯೋತ್ಪಾದಕ ರಾಷ್ಟ್ರದ ಪಟ್ಟಿಯಿಂದ ಹೊರಗಿಡಲು ಅಮೆರಿಕ ಮುಂದಾಗಿದ್ದು, ಅಮೇರಿಕಾ ಭಯೋತ್ಪಾದನಾ ಸಂತ್ರಸ್ತರ ಕುಟುಂಬಗಳಿಗೆ 335 ಮಿಲಿಯನ್ ಡಾಲರ್ ಪರಿಹಾರ ನೀಡಲು ಸುಡಾನ್ ಒಪ್ಪಿಗೆ ನೀಡಿದ ಬಳಿಕ ಅಮೇರಿಕಾ ನಿರ್ಧಾರ ಕೈಗೊಂಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಟ್ರಂಪ್, ಪರಿಹಾರ ಹಣವನ್ನು ವರ್ಗಾವಣೆ ಮಾಡಿದ ಕೂಡಲೇ ಪಟ್ಟಿಯಿಂದ ಹೊರಕ್ಕೆ ತೆಗೆಯಲಾಗುತ್ತದೆ ಮತ್ತು ಆಫ್ರಿಕನ್ ದೇಶಗಳು ಅಂತಾರಾಷ್ಟ್ರೀಯ ಸಾಲ ಪಡೆಯಲು ಕೂಡ ಈ ಕ್ರಮದಿಂದ ನೆರವಾಗಲಿದೆ.
ಇನ್ನು ಇಸ್ರೇಲ್ಗೆ ಗಲ್ಫ್ ರಾಷ್ಟ್ರಗಳ ಮಾಹಿತಿ ನೀಡಲು ಸುಡಾನ್ ಒಪ್ಪಿಕೊಂಡಿದ್ದು, ಗಲ್ಫ್ ರಾಷ್ಟ್ರಗಳ ವಿವಾದಕ್ಕೆ ತೆರೆ ಎಳೆಯಲು ಅಮೇರಿಕಾ ಹಾಗೂ ಇಸ್ರೇಲ್ ಜಂಟಿಯಾಗಿ ಪ್ರಯತ್ನಿಸುತ್ತಿವೆ ಎಂದು ತಿಳಿದು ಬಂದಿದೆ.