ವಾಷಿಂಗ್ಟನ್, ಅ. 20 (DaijiworldNews/PY): ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರನ್ನು ದುರ್ಗಾಮಾತೆಗೆ ಹೋಲಿಕೆ ಮಾಡಿ ಚಿತ್ರಿಸಿ ಅದನ್ನು ಟ್ವೀಟ್ ಮಾಡಿರುವ ಮೀನಾ ಹ್ಯಾರಿಸ್ ಅವರು ಕ್ಷಮೆ ಕೇಳಬೇಕು ಎಂದು ಅಮೇರಿಕಾದಲ್ಲಿನ ಹಿಂದೂ ಸಮುದಾಯದವರು ಆಗ್ರಹಿಸಿದ್ದಾರೆ.
ಹಿಂದೂ ಅಮೆರಿಕನ್ ಫೌಂಡೇಷನ್ನ ಸುಹಾಗ್ ಎ ಶುಕ್ಲಾ ಅವರು ಮೀನಾ ಹ್ಯಾರಿಸ್ ಅವರ ಟ್ವೀಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನೀವು ದುರ್ಗಾಮಾತೆಯ ವ್ಯಂಗ್ಯಚಿತ್ರವನ್ನು ಮಾಡಿದ್ದು, ಈ ರೀತಿ ದೇವಿಯ ಮುಖವನ್ನು ತಿರುಚಿದಂತೆ ಚಿತ್ರಿಸಿ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದೀರಿ ಎಂದಿದ್ದಾರೆ.
ಈ ರೀತಿಯಾದ ಚಿತ್ರವನ್ನು ಮೀನಾ ಹಾರಿಸಿ ಅವರು ಮಾಡಿಲ್ಲ. ಅವರು ಟ್ವೀಟ್ ಮಾಡುವ ಮುನ್ನ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ರವಾನೆಯಾಗಿದೆ. ಈ ರೀತಿಯಾದ ಚಿತ್ರವನ್ನು ನಮ್ಮ ತಂಡ ಚಿತ್ರಿಸಿಲ್ಲ ಎಂದು ಹಿಂದೂ ಅಮೆರಿಕನ್ ಪೊಲಿಟಿಕಲ್ ಆಕ್ಷನ್ ಕಮಿಟಿಯ ರಿಷಿ ಭೂತಾಡಾ ಹೇಳಿದ್ದಾರೆ.
ಮೀನಾ ಹ್ಯಾರಿಸ್ ಅವರು ಮಕ್ಕಳದ ಪುಸ್ತಕದ ಲೇಖಕಿ ಹಾಗೂ ಫೆನೊಮಿನಲ್ ವುಮೆನ್ ಆಕ್ಷನ್ ಆಂದೋಲನದ ಸಂಸ್ಥಾಪಕಿಯಾಗಿದ್ದಾರೆ.