ನಾಶ್ವಿಲ್ಲೆ, ಅ.22 (DaijiworldNews/HR): ಅಮೇರಿಕಾದ ನೂತನ ಅಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದ ಜೊ ಬಿಡೆನ್ ನಡುವೆ ಎರಡನೇ ಮತ್ತು ಕೊನೆಯ ಸಂವಾದ ಇಂದು ರಾತ್ರಿ ನಡೆಯಲಿದೆ.
90 ನಿಮಿಷಗಳ ಅವಧಿಯ ಮುಖಾಮುಖಿ ವೇಳೆ ಟ್ರಂಪ್ ಹಾಗೂ ಬಿಡನ್ ಅವರು ದೇಶದ ಜನರ ಮುಂದೆ ತಮ್ಮ ಸಾಧನೆ ಕುರಿತು ಪ್ರಸ್ತುತಪಡಿಸಲಿದ್ದಾರೆ.
ಇನ್ನು ಅಧ್ಯಕ್ಷ ಸ್ಥಾನಕ್ಕಾಗಿ ನಡೆದಿರುವ ಈ ಪೈಪೋಟಿಗೆ ಸಂಬಂಧಿಸಿ ಈವರೆಗೆ ನಡೆದಿರುವ ಸಮೀಕ್ಷೆಯಲ್ಲಿ ಬಿಡನ್ ಅವರದೇ ಮೇಲುಗೈ ಹೊಂದಿದ್ದು, ಟ್ರಂಪ್ ಗೆ ತುಸು ಆತಂಕಕ್ಕೆ ಕಾರಣವಾಗಿದೆ.
ಬಿಡನ್ ವಿರುದ್ಧ ಟ್ರಂಪ್ ಆಕ್ರಮಣಕಾರಿ ಮಾತುಗಳನ್ನಾಡುತ್ತಲೇ ಬಂದಿದ್ದಾರೆ. ಆದರೆ, ಬಿಡನ್ ವಿರುದ್ಧದ ಟೀಕೆಗಳು ಟ್ರಂಪ್ ಅವರಿಗೇ ತಿರುಗುಬಾಣವಾಗಿದ್ದಕ್ಕೆ ಕಳೆದ ತಿಂಗಳು ನಡೆದ ಮೊದಲ ಸಂವಾದವೇ ಸಾಕ್ಷಿಯಾಗಿತ್ತು ಎಂದೂ ಹೇಳಬಹುದು.