ಇಸ್ಲಾಮಾಬಾದ್,ಅ.22 (DaijiworldNews/HR): ಮಾಜಿ ಪ್ರಧಾನಿ ನವಾಜ್ ಷರೀಫ್(70 ) ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದು, ಅವರನ್ನು ಹಸ್ತಾಂತರಿಸುವಂತೆ ಪಾಕಿಸ್ತಾನ ಮೂರನೇ ಬಾರಿ ಬ್ರಿಟನ್ಗೆ ಮನವಿ ಮಾಡಿದೆ ಎಂದು ತಿಳಿದು ಬಂದಿದೆ.
ಮನವಿಯಲ್ಲಿ ಪತ್ರದಲ್ಲಿ ಷರೀಫ್ ಅವರು ಚಿಕಿತ್ಸೆ ಕಾರಣ ನೀಡಿ ಕಳೆದ ನವೆಂಬರ್ನಿಂದ ಲಂಡನ್ನಲ್ಲಿ ವಾಸಿಸುತ್ತಿದ್ದಾರೆ. ಕೂಡಲೇ ಅವರ ವೀಸಾ ರದ್ದು ಮಾಡಬೇಕು. ಬ್ರಿಟನ್ನ ವಲಸೆ ಕಾಯ್ದೆ 1974 ಅನ್ವಯ, ನಾಲ್ಕಕ್ಕಿಂತ ಹೆಚ್ಚು ವರ್ಷ ಜೈಲು ಶಿಕ್ಷೆಗೆ ಗುರಿಯಾದ ಯಾವುದೇ ವ್ಯಕ್ತಿಯನ್ನು ದೇಶಕ್ಕೆ ಹಸ್ತಾಂತರಿಸಬೇಕು. ಇದನ್ನು ಪರಿಗಣಿಸಿ ಕೂಡಲೇ ಷರೀಫ್ ಅವರನ್ನು ಹಸ್ತಾಂತರಿಸಬೇಕು ಎಂಬುದಾಗಿ ಕೋರಲಾಗಿದೆ.
ಪಾಕಿಸ್ತಾನ ಮುಸ್ಲಿಂ ಲೀಗ್ ವರಿಷ್ಠ ನವಾಜ್ ಷರೀಫ್ ಅವರು ಭ್ರಷ್ಟಾಚಾರ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸುಪ್ರೀಂಕೋರ್ಟ್ 2017ರಲ್ಲಿ ಘೋಷಿಸಿದ ನಂತರ ಅವರನ್ನು ಪ್ರಧಾನಿ ಹುದ್ದೆಯಿಂದ ಅವರನ್ನು ಕೆಳಗಿಳಿಸಲಾಯಿತು.