ವಾಷಿಂಗ್ಟನ್ ಡಿಸಿ, ಅ. 23 (DaijiworldNews/PY): ಭಾರತ, ರಷ್ಯಾ, ಚೀನಾ ದೇಶಗಳ ವಾಯು ಮಾಲಿನ್ಯಕ್ಕೆ ಹೋಲಿಕೆ ಮಾಡಿದರೆ ಅಮೇರಿಕಾದಲ್ಲಿ ಶುದ್ದವಾದ ಗಾಳಿಯಿದೆ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಹವಾಮಾನ ಬದಲಾವಣೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿರುವ ಅವರು, ಭಾರತ ಸೇರಿದಂತೆ ಚೀನಾ, ರಷ್ಯಾ ದೇಶಗಳಲ್ಲಿ ಗಾಳಿ ಕಲುಷಿತವಾಗಿದೆ. ಆದರೆ, ಅಮೇರಿಕಾದಲ್ಲಿ ಶುದ್ದವಾದ ಗಾಳಿಯಿದೆ, ಸ್ವಚ್ಛವಾದ ಜಲವಿದೆ ಎಂದು ಭಾರತವನ್ನು ಟೀಕಿಸಿದ್ದಾರೆ.
ಕಪ್ಪು ಜನಾಂಗದವರಿಗೆ ಅಬ್ರಹಾಂ ಲಿಂಕನ್ ಅವರನ್ನು ಹೊರತುಪಡಿಸಿ ಬೇರೆ ಯಾವ ಅಧ್ಯಕ್ಷರೂ ಮಾಡದಷ್ಟು ಕಾರ್ಯವನ್ನು ನಾನು ನಿರ್ವಹಿಸಿದ್ದೇನೆ. ಅಲ್ಲದೇ, ಅವರಿಗಾಗಿ ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದೇನೆ ಎಂದು ಟ್ರಂಪ್ ಹೇಳಿದ್ದರು.
ಟ್ರಂಪ್ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಜೋ ಬಿಡೆನ್, ಈವರೆಗೆ ಅಮೇರಿಕಾದಲ್ಲಿ ಎಲ್ಲಾ ಅಧ್ಯಕ್ಷರಿಗಿಂತಲೂ ಅತೀ ಹೆಚ್ಚು ವರ್ಣಬೇಧವಿದ್ದ ಅಧ್ಯಕ್ಷರೆಂದರೆ ಅದು ಅಬ್ರಾಹಾಂ ಲಿಂಕನ್ ಅವರು. ಟ್ರಂಪ್ ಅವರನ್ನು ಸುಖಾ ಸುಮ್ಮನೆ ಹೊಗಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಅಮೇರಿಕಾ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಹಾಗೂ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಟರ್ ಅವರು ಭಾರತ-ಅಮೇರಿಕಾದ ಸಹಭಾಗಿತ್ವ ಬೆಳೆಸು ಸಲುವಾಗಿ ಭಾರತಕ್ಕೆ ಭೇಟಿ ಕೊಡಲಿದ್ದಾರೆ.