ಇಸ್ಲಾಮಾಬಾದ್, ಅ. 23 (DaijiworldNews/MB) : ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ವಿರುದ್ಧ ಹೊಸ ಪ್ರಕರಣಕ್ಕೆ ಪಾಕಿಸ್ತಾನ ಭ್ರಷ್ಟಾಚಾರ ನಿಗ್ರಹ ದಳ ಅನುಮೋದನೆ ನೀಡಿದೆ.
ಷರೀಫ್ ವಿರುದ್ಧ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಹಾಲಿ ಪ್ರಧಾನಿ ಇಮ್ರಾನ್ ಖಾನ್ ಒತ್ತಾಯಿಸಿರುವ ನಡುವೆಯೇ ಈಗ ಪಾಕಿಸ್ತಾನ ಭ್ರಷ್ಟಾಚಾರ ನಿಗ್ರಹ ದಳ ಹೊಸ ಪ್ರಕರಣಕ್ಕೆ ಅನುಮೋದನೆ ನೀಡಿದೆ.
ಈ ಪ್ರಕರಣವು ವಿದೇಶಿ ಗಣ್ಯರ ಸುರಕ್ಷತೆಗಾಗಿ 73 ಭದ್ರತಾ ವಾಹನಗಳ ಅಕ್ರಮ ಖರೀದಿ ಮತ್ತು ಸರ್ಕಾರದ ಬೊಕ್ಕಸಕ್ಕೆ 195.2 ಕೋಟಿ ನಷ್ಟ ಉಂಟು ಮಾಡಿದ ಆರೋಪದಲ್ಲಿ ಷರೀಫ್, ಚೌಧರಿ, ಸುಲ್ತಾನ್ ಮತ್ತು ಫವಾದ್ ಸೇರಿದಂತೆ ಹಲವರ ಮೇಲೆ ದಾಖಲಾಗಿರುವ ಪ್ರಕರಣವಾಗಿದೆ.
ನವಾಜ್ ಷರೀಫ್ ಅವರನ್ನು ಭ್ರಷ್ಟಾಚಾರ ಪ್ರಕರಣದಡಿ 2017ರಲ್ಲಿ ಪಾಕಿಸ್ತಾನ ಸುಪ್ರೀಂಕೋರ್ಟ್ ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿದ್ದು ವೈದ್ಯಕೀಯ ಚಿಕಿತ್ಸೆಗಾಗಿ ಎಂಟು ವಾರಗಳ ಕಾಲ ಲಂಡನ್ಗೆ ತೆರಳಲು ಕೋರ್ಟ್ನಿಂದ ಅನುಮತಿ ಪಡೆದು ಕಳೆದ ನವೆಂಬರ್ನಿಂದ ಷರೀಫ್ ಲಂಡನ್ನಲ್ಲಿ ವಾಸಿಸುತ್ತಿದ್ದಾರೆ. ಇನ್ನು ಕೂಡಾ ವಾಪಾಸ್ ಆಗಮಿಸಿಲ್ಲ.