ವಾಷಿಂಗ್ಟನ್, ಅ. 24 (DaijiworldNews/HR): ಈ ಭಾರಿಯ ಚುನಾವಣೆಯಲ್ಲಿ ಅಮೇರಿಕಾದ ಅಧ್ಯಕ್ಷರಾಗಿ ಆಯ್ಕೆಯಾದಲ್ಲಿ ಇಡೀ ದೇಶದ ಜನತೆಗೆ ಉಚಿತ ಕೊರೊನಾ ಲಸಿಕೆಯನ್ನು ಕಡ್ಡಾಯವಾಗಿ ನೀಡುವುದಾಗಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಭರವಸೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಜೋ ಬಿಡೆನ್, ವಿಮೆ ಸುರಕ್ಷೆ ಇರುವವರಿಗೆ ಹಾಗೂ ಇಲ್ಲದವರಿಗೆ ಹೀಗೆ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಹೇಳಿದ್ದಾರೆ.
ಇನ್ನು ಡೊನಾಲ್ಡ್ ಟ್ರಂಪ್ ಕೂಡಾ ಉಚಿತ ಕೊರೊನಾ ಲಸಿಕೆಯ ಅಗತ್ಯತೆಯನ್ನು ತಮ್ಮ ಭಾಷಣದಲ್ಲಿ ಹೇಳಿದ್ದರು, ಆದರೆ 2.23 ಲಕ್ಷ ಮಂದಿ ಕೊರೊನಾಕ್ಕೆ ಸಾವನ್ನಪ್ಪಿದ್ದು, ಅದನ್ನು ನಿಭಾಯಿಸುವಲ್ಲಿ ಟ್ರಂಪ್ ಆಡಳಿತ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಲಾಗಿತ್ತು. ಸೋಂಕು ಹರಡಿ ಎಂಟು ತಿಂಗಳು ಕಳೆದರೂ ಇದರ ನಿಯಂತ್ರಣಕ್ಕೆ ನಮ್ಮ ಅಧ್ಯಕ್ಷರ ಬಳಿ ಯಾವುದೇ ಯೋಜನೆ ಇಲ್ಲ ಎಂದು ಜೋ ಬಿಡೆನ್ ವಾಗ್ದಾಳಿ ನಡೆಸಿದರು.