ಸಿಯೋಲ್,ಅ. 25 (DaijiworldNews/HR): ಸ್ಯಾಮ್ ಸಂಗ್ ಸಂಸ್ಥೆಯ ಅಧ್ಯಕ್ಷ ಲೀ ಕುನ್-ಹೀ ( 78 ) ಕೊರಿಯಾದ ಸಿಯೋಲ್ ನಲ್ಲಿ ನಿಧನರಾಗಿದ್ದಾರೆ.
ಲೀ ಕುನ್-ಹೀ ಅವರ ಸಾವಿಗೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ, 2014ರಲ್ಲಿ ಅವರು ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಇನ್ನು 1987ರಲ್ಲಿ ಲೀ ಕುನ್-ಹೀ ತಮ್ಮ ತಂದೆಯ ಸಾವಿನ ಬಳಿಕ ಸ್ಯಾಮ್ಸಂಗ್ ಸಂಸ್ಥೆಯ ಉಸ್ತುವಾರಿ ವಹಿಸಿಕೊಂಡಿದ್ದು, ವಿಶ್ವಕ್ಕೆ ಚಿಪಿ ಟಿವಿ ಪರಿಚಯಿಸಿದ್ದು ಸ್ಯಾಮ್ಸಂಗ್ ಸಂಸ್ಥೆ.
ಲೀತವರು ಸಾಕಷ್ಟು ವಿಚಾರದಲ್ಲಿ ನ್ಯಾಯಾಲಯದ ವಿಚಾರಣೆ ಎದುರಿಸಿದ್ದು, ವೈಟ್ ಕಾಲರ್ ಅಪರಾಧಕ್ಕಾಗಿ ಎರಡು ಬಾರಿ ಶಿಕ್ಷೆಗೊಳಪಟ್ಟು ಕ್ಷಮೆ ಕೂಡ ಪಡೆದಿದ್ದರು.