ವಾಷಿಂಗ್ಟನ್, ಅ.25 (DaijiworldNews/PY): 2016ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರು ಜಯ ಗಳಿಸಿದ ತಕ್ಷಣವೇ ರಾಜ್ಯ ಕಾರ್ಯದರ್ಶಿ ಸ್ಥಾನದ ಆಫರ್ ನೀಡಿದ್ದರು. ಆದರೆ, ನಾನು ಅದನ್ನು ನಿರಾಕರಿಸಿದ್ದೆ ಎಂದು ಭಾರತೀಯ-ಅಮೇರಿಕನ್ ರಿಪಬ್ಲಿಕನ್ ರಾಜಕಾರಣಿ ನಿಕ್ಕಿ ಹ್ಯಾಲೆ ತಿಳಿಸಿದ್ದಾರೆ.
ಆದರೆ, ಆ ಸಂದರ್ಭ 48 ವರ್ಷದ ಹ್ಯಾಲೆ ಅವರು ದಕ್ಷಿಣ ಕೆರೊಲಿನಾದ ರಾಜ್ಯಪಾಲರಾಗಿದ್ದರು. ವಿಶ್ವಸಂಸ್ಥೆಯ ಯುಎಸ್ ರಾಯಭಾರಿ ಹುದ್ದೆಯ ಎರಡನೇ ಪ್ರಸ್ತಾಪವನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದು, ಡೊನಾಲ್ಡ್ ಟ್ರಂಪ್ ಅವರು ಎಲ್ಲಾ ರೀತಿಯ ಷರತ್ತುಗಳಿಗೆ ಒಪ್ಪಿಗೆ ನೀಡಿದ ಬಳಿಕ ಆ ಸ್ಥಾನವನ್ನು ಅಲಂಕರಿದ್ದೇನೆ ಎಂದು ನಿಕ್ಕಿ ಹೇಳಿದ್ದಾರೆ.
ಹ್ಯಾಲಿ ಅವರು ವಿಶ್ವಸಂಸ್ಥೆಯ ಅತ್ಯಂತ ಯಶಸ್ವಿ ರಾಯಭಾರಿಯಾಗಲು ತೆರಳಿದ್ದು, ಇದೀಗ ಅಮೇರಿಕಾ ಅಧ್ಯಕ್ಷೀಯ ಚುನಾವಣೆಯ ವೇಳೆ ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸಿ ಪ್ರಚಾರ ನಡೆಸುತ್ತಿದ್ದಾರೆ.
ಫಿಲಡೆಲ್ಫಿಯಾ ದಲ್ಲಿ ಇಂಡಿಯನ್ ವಾಯ್ಸ್ ಫಾರ್ ಟ್ರಂಪ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಸಾಕಷ್ಟು ಅಪಾಯ ಇದೆ ಎಂದಿದ್ದಾರೆ.