ಮ್ಯಾಡ್ರಿಡ್, ಅ.26 (DaijiworldNews/PY): ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಸ್ಪೇನ್ನಲ್ಲಿ ಎರಡನೇ ಬಾರಿಗೆ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ.
ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸ್ಪ್ಯಾನಿಷ್ನ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿದ್ದು, ಎಲ್ಲಾ ಪ್ರದೇಶಗಳಲ್ಲಿ ರಾತ್ರಿಯ ವೇಳೆ ಕರ್ಫ್ಯೂ ವಿಧಿಸಲು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯ ಬಳಿಕ ಮಾತನಾಡಿದ ಅವರು, ಇದೀಗ ನಾವು ವಿಪರೀತಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಇದು ಕಳೆದ ಶತಮಾನದಲ್ಲೇ ಅತ್ಯಂತ ಗಂಭೀರವಾದ ಆರೋಗ್ಯ ಬಿಕ್ಕಟ್ಟು ಎಂದು ಹೇಳಿದ್ದಾರೆ.
ರಾತ್ರಿಯ ವೇಳೆ ಕರ್ಫ್ಯೂ ಜಾರಿ ಮಾಡಿದ್ದು, ರಾತ್ರಿಯ ಸಂದರ್ಭ ಸಂಚಾರ ಹಾಗೂ ಆರಕ್ಕಿಂತ ಅಧಿಕ ಮಂದಿ ಭೇಟಿ ಮಾಡಲು ಅವಕಾಶವಿಲ್ಲ ಎಂದಿದ್ದಾರೆ.