ನವದೆಹಲಿ,ಅ. 26 (DaijiworldNews/HR): ಫೇಸ್ಬುಕ್ನಲ್ಲಿ ಹೆಚ್ಚಾಗುತ್ತಿರುವ ಇಸ್ಲಾಮೊಫೋಬಿಯಾ ಪೋಸ್ಟ್ಗಳನ್ನು ನಿಷೇಧಿಸಬೇಕೆಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಫೇಸ್ಬುಕ್ ಸಿಇಒ ಮಾರ್ಕ್ ಝೂಕರ್ಬರ್ಗ್ಗೆ ಪತ್ರ ಬರೆದಿದ್ದಾರೆ.
ಜಗತ್ತಿನಲ್ಲಿ ಇಸ್ಲಾಮೊಫೋಬಿಯಾ ಮೂಲಕ ದ್ವೇಷ, ತೀವ್ರಗಾಮಿತನ ಮತ್ತು ಹಿಂಸೆ ಹೆಚ್ಚಾಗಲು ಕಾರಣವಾಗುತ್ತಿವೆ ಎಂಬುದನ್ನು ನಿಮ್ಮ ಗಮನಕ್ಕೆ ತರಲೆಂದು ಈ ಪತ್ರ ಬರೆಯುತ್ತಿದ್ದೇನೆ ಎಂಬುದಾಗಿ ಇಮ್ರಾನ್ ಖಾನ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಫೇಸ್ಬುಕ್ನಲ್ಲಿ ಇಸ್ಲಾಮೋಫೋಬಿಯಾ ಹೆಚ್ಚಾಗಲು ಭಾರತ ಮತ್ತು ಫ್ರಾನ್ಸ್ ಮುಖ್ಯ ಕಾರಣವಾಗಿದೆ. ಭಾರತದ ಸಿಎಎ ಕಾಯ್ದೆ, ರಾಷ್ಟ್ರೀಯ ನಾಗರಿಕ ನೋಂದಣಿ ವಿರೋಧಿ ಪ್ರತಿಭಟನೆಗಳನ್ನು ಇಮ್ರಾನ್ಖಾನ್ ಉಲ್ಲೇಖಿಸಿದ್ದಾರೆ.
ಇನ್ನು ಕೊರೊನಾ ಹರಡಲು ತಬ್ಲೀಗಿ ಜಮಾತ್ ಕಾರಣವೆಂದು ಕೆಲವರು ಹೇಳಿದ್ದು, ಈ ಎಲ್ಲ ಬೆಳವಣಿಗೆಗಳಿಗೆ ಇಸ್ಲಾಮೊಫೋಬಿಯಾ ಮುಖ್ಯ ಕಾರಣ' ಎಂದು ದೂರಿದ್ದಾರೆ.