ವಾಷಿಂಗ್ಟನ್,ಅ. 27 (DaijiworldNews/HR): ಅಮೇರಿಕಾದ ಸುಪ್ರೀಂ ಕೋರ್ಟ್ನ 115ನೇ ನ್ಯಾಯಮೂರ್ತಿಯಾಗಿ ಆಯಮಿ ಕಾನೆ ಬ್ಯಾರೆಟ್( 48 ) ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮ್ಮುಖದಲ್ಲಿ ಶ್ವೇತಭವನದಲ್ಲಿ ನಡೆದ ಸಮಾರಂಭದಲ್ಲಿ ಆಯಮಿ ಅವರಿಗೆ ನ್ಯಾಯಮೂರ್ತಿ ಕ್ಲಾರೆನ್ಸ್ ಥಾಮಸ್ ಅವರು ಸಾಂವಿಧಾನಿಕ ಪ್ರತಿಜ್ಞಾವಿಧಿ ಬೋಧಿಸಿದರು.
ಈ ಕುರಿತು ಮಾತನಾಡಿದ ಟ್ರಂಪ್, ದೇಶದ ಪ್ರಮುಖ ಕಾನೂನು ವಿದ್ವಾಂಸರಲ್ಲಿ ಆಯಮಿ ಕೂಡ ಒಬ್ಬರು. ಅವರು ಈ ಹುದ್ದೆಗೇರಿರುವುದು ಖುಷಿಯ ವಿಚಾರ. ಅವರು ನ್ಯಾಯಮೂರ್ತಿಯಾಗಿ ಪ್ರಾಮಾಣಿಕ ಮತ್ತು ನಿಷ್ಪಕ್ಷಪಾತ ಸೇವೆ ಸಲ್ಲಿಸಲಿದ್ದಾರೆ ಎಂದರು.
ಇನ್ನು ಆಯಮಿ ಕಾನೆ ಬ್ಯಾರೆಟ್ ಪ್ರತಿಕ್ರಿಯಿಸಿ ನಾನಿಂದು ಈ ಸ್ಥಾನದಲ್ಲಿ ನಿಂತಿರುವುದಕ್ಕೆ ಬಹಳ ಸಂತೋಷವಾಗಿದೆ ಎಂದು ಹೇಳಿದ್ದಾರೆ.