ಪ್ಯಾರಿಸ್,ಅ. 29 (DaijiworldNews/HR): ಕೊರೊನಾ ಸೋಂಕು ಯುರೋಪ್ ರಾಷ್ಟ್ರಗಳಲ್ಲಿ ಹೆಚ್ಚಾಗುತ್ತಿದ್ದು, ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ದೇಶಾದ್ಯಂತ ಮತ್ತೆ ಡಿಸೆಂಬರ್ 1ರವರೆಗೆ ಲಾಕ್ ಡೌನ್ ಘೋಷಣೆ ಮಾಡಿದೆ.
ಕೊರೊನಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಫ್ರಾನ್ಸ್ ನಲ್ಲಿ ಎರಡನೇ ಬಾರಿ ಲಾಕ್ ಡೌನ್ ಹೇರಲಾಗಿದ್ದು, ಯಾವ ಹಂತಕ್ಕೆ ತಲುಪಬಹುದು ಎಂಬುದನ್ನು ಊಹಿಸಲು ಸಾಧ್ಯವಿಲ್ಲ ಎಂಬುದಾಗಿ ಮ್ಯಾಕ್ರನ್ ಟೆಲಿವಿಷನ್ ಹೇಳಿದ್ದಾರೆ.
ಇನ್ನು ಪ್ಯಾರಿಸ್ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಎರಡು ವಾರಗಳ ಹಿಂದೆ ಕರ್ಫ್ಯೂ ಹಾಕಿದ್ದರು ಕೂಡಾ ಅದು ವಿಫಲವಾಗಿದೆ. ಫ್ರಾನ್ಸ್ ನಲ್ಲಿ ಕೊರೊನಾ ಸೋಂಕಿಗೆ ಈಗಾಗಲೇ 35 ಸಾವಿರ ದಾಟಿದೆ. ಯುರೋಪ್ ನ ಇತರ ಭಾಗದಲ್ಲಿಯೂ ಎರಡನೇ ಹಂತದ ಕೊರೊನಾ ಸೋಂಕು ಮೊದಲ ಹಂತಕ್ಕಿಂತ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆ ಇದ್ದಿರುವುದಾಗಿ ಮ್ಯಾಕ್ರನ್ ಹೇಳಿದ್ದಾರೆ.