ವಾಷಿಂಗ್ಟನ್, ಅ.29 (DaijiworldNews/PY): ವಿದೇಶಿ ವೃತ್ತಿಪರರಿಗೆ ಎಚ್-1ಬಿ ಉದ್ಯೋಗ ವೀಸಾಗಳನ್ನು ನೀಡಲು ಗಣಕೀಕೃತ ಲಾಟರಿ ವ್ಯವಸ್ಥೆಯನ್ನು ರದ್ದುಗೊಳಿಸಲು ಹಾಗೂ ಅದನ್ನು ವೇತನ ಮಟ್ಟದ ಆಧಾರಿತ ಆಯ್ಕೆ ಪ್ರಕ್ರಿಯೆಯೊಂದಿಗೆ ಅನುಷ್ಠಾನಗೊಳಿಸಲು ಟ್ರಂಪ್ ಆಡಳಿತವು ಪ್ರಸ್ತಾಪಿಸಿದೆ. ಇದು ಅಮೇರಿಕಾದ ವೇತನ ಕಡಿತವನ್ನು ನಿಯಂತ್ರಿಸುವ ನಿರೀಕ್ಷೆ ಇದೆ ಎನ್ನಲಾಗಿದೆ.
ಗುರುವಾರದಂದು ಫೆಡರಲ್ ರಿಜಿಸ್ಟರ್ನಲ್ಲಿ ಈ ಹೊಸ ವ್ಯವಸ್ಥೆಯ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅಧಿಸೂಚನೆಗೆ ಪ್ರತಿಕ್ರಿಯಿಸಲು ಮಧ್ಯಸ್ಥಗಾರರಿಗೆ 30 ದಿನಗಳಿವೆ ಎಂದು ಹೋಮ್ಲ್ಯಾಂಡ್ ಸೆಕ್ಯುರಿಟಿ ಡಿಪಾರ್ಟ್ಮೆಂಟ್ ತಿಳಿಸಿದೆ.
ಎಚ್-1ಬಿ ವೀಸಾ ಅರ್ಜಿದಾರರನ್ನು ನಿರ್ಧರಿಸಲು ಗಣಕೀಕೃತ ಡ್ರಾಗಳನ್ನು ಬದಲಾಯಿಸಬೇಕು. ಈ ಬದಲಾವಣೆಯಿಂದಾಗಿ ಅಮೇರಿಕಾದ ಕಾರ್ಮಿಕರ ವೇತನದ ಮೇಲಿನ ಕಡಿತದ ಒತ್ತಡವನ್ನು ಎದುರಿಸಲು ಸಾಧ್ಯವಾಗುತ್ತದೆ ಎಂದು ಮಾಹಿತಿ ನೀಡಿದೆ.