ಪ್ಯಾರಿಸ್, ಅ.29 (DaijiworldNews/PY): ಫ್ರಾನ್ಸ್ನ ಚರ್ಚ್ವೊಂದರ ಒಳಗೆ ನುಗ್ಗಿ ಮಹಳೆಯ ರುಂಡ ಕತ್ತರಿಸಿ. ಮತ್ತಿಬ್ಬರನ್ನು ಚಾಕುವಿನಿಂದ ಹತ್ಯೆಗೈದ ಘಟನೆ ಅ.29ರ ಗುರುವಾರ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಗರದ ನೊಟ್ರೆ ಡಏಮ್ ಚರ್ಚ್ನಲ್ಲಿ ಈ ಘಟನೆ ನಡೆದಿದ್ದುಮ ಇದೊಂದು ಭಯೋತ್ಪಾದಕ ದಾಳಿ ಎಂದು ನಗರ ಮೇಯರ್ ಶಂಕೆ ವ್ಯಕ್ತಪಡಿಸಿದ್ದಾರೆ.
ಚರ್ಚ್ನೊಳಕ್ಕೆ ನುಗ್ಗಿದ ವ್ಯಕ್ತಿ ಓರ್ವ ಮಹಿಳೆಯ ರುಂಡವನ್ನು ಕತ್ತರಿಸಿದ್ದು, ಮತ್ತಿಬ್ಬರಿಗೆ ಚಾಕು ಇರಿದು ಹತ್ಯೆಗೈದಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಮೇಯರ್ ಕ್ರಿಸ್ಟಿಯಾನ್ ಎಸ್ಟ್ರೋಸಿ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಗೆ ಸಂಬಂಧಿಸಿದಂತೆ ತನಿಖೆ ಕೈಗೊಳ್ಳುವಂತೆ ಫ್ರಾನ್ಸ್ ಭಯೋತ್ಪಾದಕ ನಿಗ್ರಹ ಪ್ರಾಸಿಕ್ಯೂಟರ್ ಡಿಪಾರ್ಟ್ಮೆಂಟ್ ಹೇಳಿದೆ.
ಚರ್ಚ್ನ ಸುತ್ತಮುತ್ತಲೂ ಶಸ್ತ್ರಸಜ್ಜಿತ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಆಂಬ್ಯುಲೆನ್ಸ್ ಹಾಗೂ ಅಗ್ನಿಶಾಮಕ ದಳವೂ ಬಂದಿರುವುದಾಉ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.