ವಾಷಿಂಗ್ಟನ್, ಅ. 29 (DaijiworldNews/HR): ಕೆನಡಾ-ಭಾರತ ವ್ಯಾಪಾರ ಸಮಿತಿಯು 2020ನೇ ಸಾಲಿನ ಜಾಗತಿಕ ಸೇವಾ ಪ್ರಶಸ್ತಿಯನ್ನು ಭಾರತ ಮೂಲದ ಅಮೆರಿಕನ್ ಉದ್ಯಮಿ ಎಂ.ಆರ್ ರಂಗಸ್ವಾಮಿ ಅವರಿಗೆ ನೀಡಿ ಗೌರವಿಸಿದೆ.
ಭಾರತ ಮತ್ತು ಕೆನಡಾ ದೇಶಗಳಲ್ಲಿ ಸಲ್ಲಿಸಿರುವ ಅಸಾಧಾರಣ, ನಿಸ್ವಾರ್ಥ, ಸಮರ್ಪಣಾ ಮನೋಭಾವದ ಸೇವೆ ಸಲ್ಲಿಸುವ ವ್ಯಕ್ತಿಗಳನ್ನು ಗುರುತಿಸಿ ಜಾಗತಿಕ ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.
ಇನ್ನು ಈ ಪ್ರಶಸ್ತಿಗೆ ನನಗೆ ಸಿಕ್ಕಿರುವುದು ನನ್ನ ಸೌಭಾಗ್ಯ. ಭಾರತ ಮತ್ತು ಕೆನಡಾದ ಪ್ರಜೆಗಳು ಇಂಡಿಯಾಸ್ಪೊರಾ ಫೌಂಡೇಶನ್ನ ಪ್ರಮುಖ ಭಾಗವಾಗಿದ್ದಾರೆ. ಈ ಫೌಂಡೇಶನ್ ಮೂಲಕ ಸಮಾಜದಲ್ಲಿ ದೊಡ್ಡ ಬದಲಾವಣೆ ತರಲು ಇಚ್ಛಿಸುತ್ತೇನೆ ಎಂದು ಇಂಡಿಯಾಸ್ಪೊರಾ ಫೌಂಡೇಶನ್ ಅಧ್ಯಕ್ಷ ಹಾಗೂ ಸಿಲಿಕಾನ್ ವ್ಯಾಲಿ ಸಾಫ್ಟ್ವೇರ್ ಎಕ್ಸಿಕ್ಯೂಟಿವ್ ಆಗಿರುವ ಉದ್ಯಮಿ ರಂಗಸ್ವಾಮಿ ಹೇಳಿದ್ದಾರೆ.