ಇಸ್ತಾನ್ಬುಲ್,ಅ.30 (DaijiworldNews/HR): ಟರ್ಕಿಯ ಮಾಜಿ ಪ್ರಧಾನಿ ಮತ್ತು ಹಿರಿಯ ರಾಜಕಾರಣಿ ಮೆಸುತ್ ಯಿಲ್ಮಾಜ್ (72) ಇಂದು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಮೆಸುತ್ ಯಿಲ್ಮಾಜ್ ಅವರು 2019ರಲ್ಲಿ ಶ್ವಾಸಕೋಶ ಕ್ಯಾನ್ಸರ್ಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದು, ಬಳಿಕ ಇದೇ ವರ್ಷದ ಮೇ ತಿಂಗಳಲ್ಲಿ ಮಿದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಇಸ್ತಾನ್ಬುಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಇನ್ನು 1991ರಿಂದ 2002 ತನಕ ಟರ್ಕಿಯ ಮದರ್ಲ್ಯಾಂಡ್ ಪಕ್ಷವನ್ನು ಮುನ್ನಡೆಸಿದ್ದರು, 1990ರಲ್ಲಿ ಮೂರು ಭಾರಿ ಪ್ರಧಾನಿ ಮಂತ್ರಿಯಾಗಿ ಕಾರ್ಯನಿರ್ವಹಿಸಿದರು. ಅವರು ಎರಡು ಬಾರಿ ಪ್ರಧಾನಿಯಾಗಿದ್ದಾಗ, ಸಮಿಶ್ರ ಸರ್ಕಾರಗಳು ಪತನಗೊಂಡ ಬಳಿಕ ಕೆಲವು ತಿಂಗಳು ಮಾತ್ರ ಆಳ್ವಿಕೆ ನಡೆಸಿದ್ದರು.