ವಿಶ್ವಸಂಸ್ಥೆ, ನ.02 (DaijiworldNews/PY): ಕೊರೊನಾ ಸೋಂಕಿತ ವ್ಯಕ್ತಿ ಯ ಸಂಪರ್ಕಕಕ್ಕೆ ಬಂದಿರುವುದರಿಂದ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಡಾನೊಮ್ ಗೆಬ್ರೆಯೆಸಸ್ ಅವರು ಸ್ವಯಂ ಕ್ವಾರಂಟೈನ್ಗೆ ಒಳಪಟ್ಟಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ನಾನು ಕೊರೊನಾ ಸೋಂಕಿತ ವ್ಯಕ್ತಿಯೋರ್ವರ ಸಂಪರ್ಕಕ್ಕೆ ಬಂದಿರುವುದು ತಿಳಿದುಬಂದಿದೆ. ಆದರೆ, ಕೊರೊನಾದ ಯಾವುದೇ ರೋಗ ಲಕ್ಷಣಗಳು ನನಗೆ ಕಂಡುಬಂದಿಲ್ಲ. ನಾನು ಆರೋಗ್ಯವಾಗಿದ್ದೇನೆ. ಸ್ವಯಂ ಕ್ವಾರಂಟೈನ್ಗೆ ಒಳಗಾಗಲಿದ್ದು, ನನ್ನ ಎಲ್ಲಾ ಕೆಲಸವನ್ನು ಮನೆಯಿಂದಲೇ ನಿರ್ವಹಿಸಲಿದ್ದೇನೆ" ಎಂದು ತಿಳಿಸಿದ್ದಾರೆ.
"ನಾವೆಲ್ಲರೂ ಆರೋಗ್ಯ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು. ಕೊರೊನಾದ ಸರಪಳಿಯನ್ನು ತುಂಡರಿಸಲು ಇದು ಅವಶ್ಯಕ" ಎಂದಿದ್ದಾರೆ.