ಅಮೇರಿಕಾ, ನ.02 (DaijiworldNews/PY): ಅಧ್ಯಕ್ಷೀಯ ಚುನಾವಣೆಯಲ್ಲಿ ವಿಜಯಶಾಲಿಯಾಗಿ ಡೆಮಾಕ್ರಟಿಕ್ ಪಕ್ಷ ಅಧಿಕಾರಕ್ಕೆ ಬಂದ ಮೊದಲ ದಿನವೇ ಕೊರೊನಾ ಪ್ರಕರಣಗಳನ್ನು ನಿಯಂತ್ರಿಸುವ ಸೂಕ್ತವಾದ ಕ್ರಿಯಾ ಯೋಜನೆಗಳನ್ನು ಮಾಡುವುದಾಗಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೊ ಬಿಡೆನ್ ಹೇಳಿದ್ದಾರೆ.
ಭಾನುವಾರ ಫಿಲಿಡೆಲ್ಫಿಯಾದಲ್ಲಿ ನಡೆದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, "ಕೊರೊನಾ ಪ್ರಕರಣಗಳನ್ನು ಸರಿಯಾಗಿ ನಿರ್ವಹೊಸುವುದರಲ್ಲಿ ಟ್ರಂಪ್ ಆಡಳಿತ ವಿಫಲವಾಗಿದೆ. ಮಾಸ್ಕ್ ಧರಿಸುವ ಬದಲು ಅದನ್ನು ತಮಾಷೆ ಮಾಡುವ ಅಧ್ಯಕ್ಷರು ಇರುವ ಈ ದೇಶದಲ್ಲಿ ಇಂದು ನಾವು ಯಾವ ಸ್ಥಿತಿಗೆ ತಲುಪಿದ್ದೇವೆ ಎಂದು ನೋಡಿ. ಇದೀಗ ಟ್ರಂಪ್ ಅವರನ್ನು ಮನೆಗೆ ಕಳುಹಿಸುವ ಕಾಲ ಬಂದಿದೆ" ಎಂದಿದ್ದಾರೆ.
ಅಮೇರಿಕಾದಲ್ಲಿ ಕೊರೊನಾಕ್ಕೆ ಸುಮಾರು 2.30 ಲಕ್ಷ ಜನರು ಸಾವನ್ನಪ್ಪಿದ್ದು, 90 ಲಕ್ಷ ಕೊರೊನಾ ಸೋಂಕಿತರಿದ್ದಾರೆ.