ವಿಯೆನ್ನಾ, ನ.03 (DaijiworldNews/PY): ವಿಯೆನ್ನಾದ ಆರು ಕಡೆಗಳಲ್ಲಿ ಉಗ್ರರು ದಾಳಿ ನಡೆಸಿದ್ದು, ದಾಳಿಯ ಪರಿಣಾಮ ಇಬ್ಬರು ಮೃತಪಟ್ಟಿದ್ದ, 15 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸೋಮವಾರ ರಾತ್ರಿ ವಿಯೆನ್ನಾದ ಸಿನಗಾಗ್ ಪ್ರದೇಶದಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.
ಗುಂಡಿನ ದಾಳಿ ನಡೆಸಿದ ಉಗ್ರರಲ್ಲಿ ಓರ್ವನನ್ನು ಭದ್ರತಾ ಪಡೆಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಈ ಉಗ್ರನೊಂದಿಗೆ ಇನ್ನೂ ಹಲವು ಮಂದಿ ಉಗ್ರರು ಇರುವ ಶಂಕೆ ಇದ್ದು, ಭದ್ರತಾ ಪಡೆಗಳು ಕಾರ್ಯಾಚರಣೆ ಮುಂದುವರೆಸಿವೆ.
ಹಿಲ್ಟನ್ ಹೋಟೆಲ್ನಲ್ಲಿರುವ ಪ್ರವಾಸಿಗರನ್ನು ಈ ಉಗ್ರರ ತಂಡ ಬಂಧಿಯಾಗಿರಿಸಿದೆ ಎನ್ನಲಾಗಿದೆ. ಆಸ್ಟ್ರಿಯಾ ಸರ್ಕಾರವು ಸೇನೆಯನ್ನು ಕಳುಹಿಸಿದೆ. ಸದ್ಯ ವಿಯೆನ್ನಾ ನಗರದಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಇನ್ನು ಉಗ್ರರ ದಾಳಿಗೆ ವಿಶ್ವದ ಅನೇಕ ದೇಶಗಳು ಆಕ್ರೋಶ ವ್ಯಕ್ತಪಡಿಸಿವೆ. ಅಲ್ಲದೇ ಭಯೋತ್ಪಾದನೆಯ ವಿರುದ್ದ ಆಸ್ಟ್ರೀಯ ಹೋರಾಟದೊಂದಿಗೆ ನಿಲ್ಲುವುದಾಗಿ ತಿಳಿಸಿದೆ.