ವಾಷಿಂಗ್ಟನ್, ನ. 03 (DaijiworldNews/MB) : ''ಸಮೀಕ್ಷೆ ವರದಿ ಏನೇ ಹೇಳಲಿ, ಅದು ಲೆಕ್ಕಕ್ಕಿಲ್ಲ ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿಯೂ ಗೆಲ್ಲುವುದು ನಾನೇ'' ಎಂದು ಅಮೇರಿಕಾ ಅಧ್ಯಕ್ಷ, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
''ಡೊನಾಲ್ಡ್ ಟ್ರಂಪ್ ಅವರು ಹೀನಾಯ ಸೋಲು ಕಾಣಲಿದ್ದಾರೆ'' ಎಂಬ ಸಮೀಕ್ಷೆಯೊಂದನ್ನು ಮಾಧ್ಯಮಗಳು ಪ್ರಸಾರ ಮಾಡಿದ್ದವು. ಈ ಬಗ್ಗೆ ಅಂತಿಮ ಪ್ರಚಾರದಲ್ಲಿ ಮಾತನಾಡಿದ ಅವರು, ''ನಾನು ಹಲವು ನಕಲಿ ಚುನಾವಣಾ ಸಮೀಕ್ಷೆಗಳನ್ನು ನೋಡಿದ್ದೇನೆ. ಅವೆಲ್ಲವೂ ಸುಳ್ಳು. ನಾನೇ ಗೆಲ್ಲುವುದು'' ಎಂದು ಹೇಳಿದ್ದಾರೆ.
''ನಾಲ್ಕು ವರ್ಷದ ಹಿಂದೆ ನೀವು ನನಗೆ ಮತ ನೀಡಿ ವಿರೋಧಿಗಳಿಗೆ ಆಘಾತ ಉಂಟು ಮಾಡಿದ್ದಂತೆ ಈ ಬಾರಿಯೂ ನನಗೆ ಮತ ನೀಡಿ. ಮೊದಲು ಮತ ಹಾಕಿ ಅದಷ್ಟೇ ನಾನು ಕೇಳುವುದು'' ಎಂದು ಹೇಳಿದ್ದಾರೆ.
ಅಮೇರಿಕಾದಲ್ಲಿ ನವೆಂಬರ್ 3 ರಂದು ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.