ವಾಷಿಂಗ್ಟನ್, ನ. 04 (DaijiworldNews/MB) : ಕೊರೊನಾ ಸೋಂಕಿನ ನಡುವೆಯೂ ಅಮೇರಿಕಾ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದ್ದು 10 ಕೋಟಿಗೂ ಅಧಿಕ ಮತದಾರರು ಹಕ್ಕು ಚಲಾಯಿಸಿದ್ದರು. ಪ್ರಸ್ತುತ ಇರುವ ಮಾಹಿತಿಯ ಪ್ರಕಾರವಾಗಿ ಡೆಮಾಕ್ರೆಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಮುನ್ನಡೆಯಲ್ಲಿದ್ದಾರೆ ಎಂದು ವರದಿ ತಿಳಿಸಿದೆ.
538 ಸ್ಥಾನಗಳ ಪೈಕಿ ಜೋ ಬಿಡೆನ್ 215 ಹಾಗೂ ಡೊನಾಲ್ಡ್ ಟ್ರಂಪ್ 164 ಸ್ಥಾನಗಳಲ್ಲಿ ಮುನ್ನಡೆಯಲಿದ್ದಾರೆ. ಜೋ ಬಿಡೆನ್ 8 ರಾಜ್ಯಗಳಲ್ಲಿ ಮುನ್ನಡೆ ಸಾಧಿಸಿದ್ದು ಟ್ರಂಪ್ 7 ರಾಜ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಸ್ಪಷ್ಟವಾದ ಬಹುಮತ ಸಾಧಿಸಲು 270 ಸ್ಥಾನಗಳ ಅಗತ್ಯವಿದ್ದು ಜೋ ಬಿಡೆನ್ ಇದೇ ಮುನ್ನಡೆಯಲ್ಲಿ ಇದ್ದರೆ ಗೆಲುವು ಅವರ ತೆಕ್ಕೆಗೆ ಸೇರಲಿದೆ ಎಂದು ವರದಿ ತಿಳಿಸಿದೆ. ಹಾಗೆಯೇ ಬಿಡೆನ್ಗೆ ಇನ್ನೂ ಕೂಡಾ 60 ಸ್ಥಾನಗಳ ಅಗತ್ಯವಿದೆ.