ವಾಷಿಂಗ್ಟನ್,ನ. 04 (DaijiworldNews/HR): ಡೆಮಾಕ್ರಟಿಕ್ ಕಾಂಗ್ರೆಸ್ ಅಭ್ಯರ್ಥಿ ರಾಜಾ ಕೃಷ್ಣಮೂರ್ತಿ(47) ಯವರು ಭಾರತ ಮೂಲದವರಗಿದ್ದು, ಇದೀಗ ಸತತ ಮೂರನೇ ಬಾರಿಗೆ ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಗೆ ಮರು ಆಯ್ಕೆಯಾಗಿದ್ದಾರೆ.
ಕೃಷ್ಣಮೂರ್ತಿ ದೆಹಲಿಯಲ್ಲಿ ಜನಿಸಿದವರಾಗಿದ್ದು, ಅವರ ಪೋಷಕರು ತಮಿಳು ನಾಡಿನವರು.
ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಗೆ 2016ರಲ್ಲಿ ಮೊದಲ ಬಾರಿಗೆ ಕೃಷ್ಣಮೂರ್ತಿ ಅವರು ಆಯ್ಕೆಯಾಗಿದ್ದರು.
ಇನ್ನು ಭಾರತೀಯ ಮೂಲದ ಮತ್ತೊಬ್ಬ ಮಹಿಳೆ ಕಾಂಗ್ರೆಸ್ಸಿನ ಪ್ರಮೀಳಾ ಜಯಪಾಲ್ ವಾಷಿಂಗ್ಟನ್ ರಾಜ್ಯದಿಂದ ಸತತ ಮೂರನೇ ಬಾರಿ ಆಯ್ಕೆ ಬಯಸಿದ್ದು, ಕ್ಯಾಲಿಫೋರ್ನಿಯಾ ಮತ್ತು ವಾಷಿಂಗ್ಟನ್ ರಾಜ್ಯಗಳಲ್ಲಿ ಮತದಾನ ಮುಂದುವರಿದಿದ್ದು ಫಲಿತಾಂಶ ಇನ್ನಷ್ಟೆ ಹೊರಬೀಳಲಿದೆ.