ವಾಷಿಂಗ್ಟನ್,ನ. 04 (DaijiworldNews/HR): ಅಕ್ಟೋಬರ್ 5 ರಂದು ಕೊರೊನಾ ಸೋಂಕುನಿಂದ ಮೃತಪಟ್ಟಿದ್ದ ಉತ್ತರ ಡಕೋಟಾದ ರಿಪಬ್ಲಿಕನ್ ನಾಯಕ ಡೇವಿಡ್ ಆಂದಲ್(55 ) ರಾಜ್ಯ ಅಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಘೋಷಿಸಲಾಗಿದೆ.
ಕೊರೊನಾ ಸೋಂಕಿನಿಂದ ಡೇವಿಡ್ ಮೃತಪಟ್ಟ ತಿಂಗಳ ನಂತರ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಇಂದು ಪ್ರಕಟಿಸಿದ ಫಲಿತಾಂಶದಲ್ಲಿ ಡೇವಿಡ್ ಆಂದಲ್ ಗೆದ್ದಿರುವುದಾಗಿ ಅಧಿಕಾರಿಗಳು ಘೋಷಿಸಿದ್ದಾರೆ.
ಇನ್ನು ಉತ್ತರ ಡಕೋಟಾದ ಬಿಸ್ಮಾರ್ಕ್ ಪ್ರದೇಶದಲ್ಲಿ ರಿಪಬ್ಲಿಕನ್ ಪಕ್ಷದ ಡೇವಿಡ್ ಆಂದಲ್, ಡೇವ್ ನೆಹ್ರಿಂಗ್ ಸ್ಪರ್ಧಿಸಿದ್ದು, ಜಿಲ್ಲೆಯಲ್ಲಿ ಇಬ್ಬರು ಪ್ರತಿನಿಧಿಗಳನ್ನು ಜನರು ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಡೇವಿಡ್ ಗೆಲುವು ಸಾಧಿಸಿದ್ದಾರೆ.
ಡೇವಿಡ್ ಅವರು ರೈತರು, ಕಲ್ಲಿದ್ದಲು ಉದ್ಯಮಕ್ಕೆ ಸಾಕಷ್ಟು ಸೇವೆ ಸಲ್ಲಿಸಬೇಕು ಎಂಬ ಆಸೆ ಪಟ್ಟಿದ್ದರು ಎಂದು ಅವರ ತಾಯಿ ಹೇಳಿಕೊಂಡಿದ್ದಾರೆ.