ವಾಷಿಂಗ್ಟನ್, ನ. 05 (DaijiworldNews/MB) : ಅಮೇರಿಕಾ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಿರ್ಣಾಯಕ ಹಂತಕ್ಕೆ ತಲುಪ್ಪಿದ್ದು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ 264 ರಾಜ್ಯದಲ್ಲಿ ಗೆಲುವು ತಮ್ಮದಾಗಿಸಿಕೊಂಡಿದ್ದು ಪ್ರಸ್ತುತ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ 214 ರಾಜ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಗೆಲ್ಲಲು ಒಟ್ಟು 270 ಸ್ಥಾನದಲ್ಲಿ ಜಯಗಳಿಸುವುದು ಅಗತ್ಯವಿದ್ದು ಬಿಡೆನ್ ನಿಚ್ಚಳ ಗೆಲುವಿನತ್ತ ಸಾಗಿದ್ದಾರೆ.
ಈ ನಡುವೆ ಚುನಾವಣೆಗೆ ಸಂಬಂಧಿಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ ಡೊನಾಲ್ಡ್ ಟ್ರಂಪ್ ಬುಧವಾರ, ''ಚುನಾವಣೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೇನೆ'' ಎಂದು ಹೇಳಿದ್ದರು. ಅದರಂತೆ ಬಾಕಿಯಿರುವ ಎಣಿಕೆಯನ್ನು ಸ್ಥಗಿತಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದು ಪ್ರಮುಖ ರಾಜ್ಯಗಳಲ್ಲಿ ಮರು ಎಣಿಕೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಹಾಗೆಯೇ ''ಇದು ಸಾಮೂಹಿಕ ವಂಚನೆ'' ಎಂದು ಆರೋಪಿಸಿದ್ದಾರೆ.
ಏತನ್ಮಧ್ಯೆ ಅಭ್ಯರ್ಥಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಲಿರುವ ಮಿಷಿಗನ್ ಮತ್ತು ವಿಸ್ಕಾನ್ಸಿಸ್ ರಾಜ್ಯಗಳಲ್ಲಿ ಬಿಡೆನ್ ಗೆಲುವು ಸಾಧಿಸಿದ್ದಾರೆ.
ಇನ್ನು ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷೆ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್, ''ನಾವು ಫಲಿತಾಂಶ ಸಂಪೂರ್ಣವಾಗಿ ಬಂದ ಬಳಿಕವೇ ಬಿಡೆನ್ ಗೆದಿದ್ದಾರೆ ಎಂದು ನಂಬುತ್ತೇವೆ'' ಎಂದು ಹೇಳಿದ್ದಾರೆ.