ಸ್ಯಾನ್ಫ್ರಾನ್ಸಿಸ್ಕೊ, ನ. 05 (DaijiworldNews/MB) : ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆದ್ದಿದ್ದಾರೆ ಎಂದು ಹೇಳಿರುವ ವೀಡಿಯೊವನ್ನು ನಿರ್ಬಂಧಿಸಲು ಗೂಗಲ್ ಒಡೆತನದ ಯೂಟ್ಯೂಬ್ ನಿರಾಕರಿಸಿದೆ ಎಂದು ವರದಿ ತಿಳಿಸಿದೆ.
ಈ ವಿಡಿಯೋ ಚುನಾವಣೆ ಮಾಹಿತಿ ನೀತಿಯನ್ನು ಉಲ್ಲಂಘಿಸುವುದಿಲ್ಲ ಎಂದು ಯೂಟ್ಯೂಬ್ ಹೇಳಿದೆ.
"ಟ್ರಂಪ್ ಗೆದ್ದಿದ್ದಾರೆ. ನಿಮ್ಮ ಕಣ್ಣುಗಳನ್ನು ನೀವು ನಂಬುವುದಿಲ್ಲ ಎಂದು ಎಂಎಸ್ಎಂ ತಿಳಿದಿದೆ" ಎಂಬ ಶೀರ್ಷಿಕೆಯ ವೀಡಿಯೊವನ್ನು ಟ್ರಂಪ್ ಪರ ಗುಂಪು ವನ್ ಅಮೇರಿಕನ್ ನ್ಯೂಸ್ ನೆಟ್ವರ್ಕ್ನಲ್ಲಿ ಬುಧವಾರ ಪ್ರಕಟಿಸಿದೆ.
ಆಧಾರ ರಹಿತ ಮಾಹಿತಿ ನೀಡುವ ಈ ವಿಡಿಯೋದ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ವೀಕ್ಷಕರು ಹೇಳಿದ್ದು, ವೀಡಿಯೊ ತನ್ನ ಜಾಹೀರಾತು ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತದೆ. ಆದರೆ ಮಾಹಿತಿ ನೀತಿಗಳನ್ನು ಅಲ್ಲ ಎಂದು ಹೇಳಿರುವ ಯೂಟ್ಯೂಬ್, ವೀಡಿಯೊದಲ್ಲಿ ಜಾಹೀರಾತುಗಳನ್ನು ಸ್ಥಗಿತಗೊಳಿಸಿದೆ. ಈ ವಿಡಿಯೋವನ್ನು 3 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ.
ಈ ವಿಡಿಯೋ ಪ್ರದರ್ಶಿಸಬಹುದಾದ ಸುಳ್ಳು ನೀತಿಯ ವ್ಯಾಪ್ತಿಯಲ್ಲಿದೆ. ಸುಳ್ಳು ಮಾಹಿತಿಗಳನ್ನು ನೀಡುವ ವಿಡಿಯೋಗಳಿಗೆ ನಾವು ಜಾಹೀರಾತು ನೀಡಲು ಅನುಮತಿ ನೀಡುವುದಿಲ್ಲ ಎಂದು ಕಂಪೆನಿಯು ಹೇಳಿದೆ.
ವೀಡಿಯೊದಲ್ಲಿ ಆಂಕರ್, ''ಟ್ರಂಪ್ ಮತ್ತೊಂದು ಭಾರಿ ಗೆದ್ದಿದ್ದಾರೆ'' ಎಂದು ಹೇಳಿದ್ದು, ''ಚುನಾವಣಾ ಫಲಿತಾಂಶಗಳು ಅಂತಿಮವಲ್ಲ'' ಎಂದು ಕೂಡಾ ವಿಡಿಯೋದ ಕೆಳಭಾಗದಲ್ಲಿ ಉಲ್ಲೇಖಿಸಲಾಗಿದೆ.