ಜಕಾರ್ತಾ, ನ.05 (DaijiworldNews/PY): 78 ವರ್ಷದ ವೃದ್ದರೋರ್ವರು 17ರ ಬಾಲಕಿಯನ್ನು ವಿವಾಹವಾಗಿದ್ದಾರೆ. ಆದರೆ, ವಿವಾಹವಾದ ಕೇವಲ 22 ದಿನಗಳಲ್ಲೇ ವಿಚ್ಛೇದನ ಪಡೆದಿರುವ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.
ದಂಪತಿಯನ್ನು 78 ವರ್ಷದ ಅಬಾ ಸರ್ನಾ ಹಾಗೂ ಪತ್ನಿ ನೋನಿ ನವಿತಾ ಎಂದು ಗುರುತಿಸಲಾಗಿದೆ.
ವೃದ್ದ ಸಬಾ ಸರ್ನಾ ಅವರು ನೋನಿ ನವಿತಾ ಅವರಿಗೆ ವಿಚ್ಛೇದನ ಪತ್ರ ಕಳುಹಿಸಿರುವ ಕಾರಣ ನೋನಿ ಹಾಗೂ ಆಕೆಯ ಕುಟುಂಬದವರಿಗೆ ಆಘಾತವಾಗಿದೆ. ಹುಡುಗಿಯ ಅಥವಾ ಆಕೆಯ ಕುಟುಂದವರಿಗಾಗಲಿ ಈ ಸಂಬಂಧದ ಬಗ್ಗೆ ಯಾವುದೇ ರೀತಿಯಾದ ಸಮಸ್ಯೆ ಇರಲಿಲ್ಲ. ಯಾವುದೇ ರೀತಿಯಾದ ಮುನ್ಸೂಚನೆ ನೀಡದೇ ವಿಚ್ಛೇದನ ಪತ್ರ ನೀಡಿರುವ ಬಗ್ಗೆ ನೋನಿ ಕುಟುಂಬಕ್ಕೆ ಆಘಾತವಾಗಿದೆ ಎಂದು ನೋನಿ ಸಹೋದರಿ ಅಯಾನ್ ಹೇಳಿದ್ದಾರೆ.
ನಮ್ಮ ಕುಟುಂಬದವರಿಗೆ ಅಬಾಸರ್ನಾ ಅವರ ಬಗ್ಗೆ ಯಾವುದೇ ಸಮಸ್ಯೆಯಿಲ್ಲ. ಆದರೆ, ಅಬಾ ಸರ್ನಾ ಹಾಗೂ ಅವರ ಕುಟುಂಬದವರಿಂದ ಸಮಸ್ಯೆಯಾಗಿದೆ. ಅಲ್ಲದೇ, ವಿವಾಹಕ್ಕೆ ಅನಾ ಸರ್ನಾ ಕುಟುಂಬದವರು ಆಕ್ಷೇಪ ವ್ಯಕ್ತಪಡಿಸಿದ್ದರು.
ವಿವಾಹಕ್ಕೂ ಮುನ್ನ ನೋನಿ ನವಿತಾ ಗರ್ಭಿಣಿಯಾಗಿದ್ದ ಕಾರಣ ದಂಪತಿಗಳು ಬೇರೆಯಾಗಿದ್ದಾರೆ ಎನ್ನುವ ಬಗ್ಗೆ ಆರೋಪಗಳು ಕೇಳಿ ಬಂದಿದ್ದು, ಈ ವಿಚಾರವನ್ನು ಅಯಾನ್ ನಿರಾಕರಿಸಿದ್ದಾರೆ.
ನೋನಿ ನವಿತಾಗೆ ಬೃದ್ದ ಅಬಾ ಸರ್ನಾ ಅವರು ಮಧುದಕ್ಷಿಣೆಯಾಗಿ ಸುಮಾರು 50 ಸಾವಿರ ರೂ ಮೌಲ್ಯದ ಮೋಟರ್ ಸೈಕಲ್ ಸೇರಿದಂತೆ ಹಾಸಿಗೆ ಮುಂತಾದವುಗಳನ್ನು ನೀಡಿದ್ದು, ಇದನ್ನು ಅನಾ ವಾಪಸ್ ಪಡೆದುಕೊಂಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.