ವಾಷಿಂಗ್ಟನ್, ನ.05 (DaijiworldNews/PY): "ನಾವು ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಲಿದ್ದೇವೆ" ಎಂದು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೊ ಬಿಡೆನ್ ಹೇಳಿದ್ದಾರೆ.
ಈ ಬಗ್ಗೆ ಗುರವಾರ ವಿಡಿಯೋ ಟ್ವೀಟ್ ಮಾಡಿರುವ ಅವರು, "ಅಧ್ಯಕ್ಷೀಯ ಚುನಾವಣೆಯಲ್ಲಿ ನಾವು ವಿಜಯಶಾಲಿಯಾಗಿ ಹೊರಹೊಮ್ಮಲಿದ್ದೇವೆ. ಆದರೆ, ಇದು ನನ್ನ ಗೆಲುವು ಮಾತ್ರ ಅಲ್ಲ. ಇದು ಅಮೇರಿಕಾದ ಜನತೆಯ ಗೆಲುವು" ಎಂದಿದ್ದಾರೆ.
"ನಮ್ಮಿಂದ ನಮ್ಮ ಪ್ರಜಾಪ್ರಭುತ್ವವವನ್ನು ಯಾರಿಂದಲೂ ದೂರ ಮಾಡಲು ಆಗುವುದಿಲ್ಲ. ಅಲ್ಲದೇ, ನಮ್ಮನ್ನು ಮೌನವಾಗಿರಿಸಲು ಅಥವಾ ನಮ್ಮ ಧ್ವನಿಗಳನ್ನು ನಾಶಪಡಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.
ಅಮೇರಿಕಾ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಿರ್ಣಾಯಕ ಹಂತಕ್ಕೆ ತಲುಪ್ಪಿದ್ದು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ 264 ರಾಜ್ಯದಲ್ಲಿ ಗೆಲುವು ತಮ್ಮದಾಗಿಸಿಕೊಂಡಿದ್ದು ಪ್ರಸ್ತುತ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ 214 ರಾಜ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಈ ನಡುವೆ ಚುನಾವಣೆಗೆ ಸಂಬಂಧಿಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ ಡೊನಾಲ್ಡ್ ಟ್ರಂಪ್, ಬಾಕಿಯಿರುವ ಎಣಿಕೆಯನ್ನು ಸ್ಥಗಿತಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದು, ಪ್ರಮುಖ ರಾಜ್ಯಗಳಲ್ಲಿ ಮರು ಎಣಿಕೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಹಾಗೆಯೇ ''ಇದು ಸಾಮೂಹಿಕ ವಂಚನೆ'' ಎಂದು ಆರೋಪಿಸಿದ್ದಾರೆ.
ಜೊ ಬೈಡನ್ ಅವರು ಮಿಷಿಗನ್ ಹಾಗೂ ವಿಸ್ಕಾನ್ಸಿಸ್ಗಳಲ್ಲಿ ಗೆಲುವು ಸಾಧಿಸಿದ್ದಾರೆ. ಆದರೆ, ಡೊನಾಲ್ಡ್ ಟ್ರಂಪ್ ಅವರಿಗೆ ಈ ಎರಡೂ ರಾಜ್ಯಗಳಲ್ಲಿ ಹಿನ್ನಡೆಯಾಗಿದೆ.