ವಾಷಿಂಗ್ಟನ್ ,ನ. 06 (DaijiworldNews/HR): ಪರಿಸರ ಹೋರಾಟಗಾರ್ತಿ ಗ್ರೆಟಾ ತನ್ಬರ್ಗ್(17)ನನ್ನು ಟೈಮ್ ಮ್ಯಾಗಜೀನ್ನ ವರ್ಷದ ವ್ಯಕ್ತಿಯಾಗಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಯ್ಕೆಯಾಗಿದ್ದಾಗ ಹಂಗಿಸಿದ್ದಕ್ಕಾಗಿ ಇದೀಗ ಆಕೆ "ಚಿಲ್ ಡೊನಾಲ್ಡ್ ಚಿಲ್'' ಎಂಬ ಟ್ರಂಪ್ ಅವರ ಮಾತುಗಳ ಮೂಲಕ ತಿರುಗೇಟು ನೀಡಿದ್ದಾರೆ.
ಈ ಕುರಿತು ಮತದಾನದಲ್ಲಿ ವಂಚನೆಯಾಗಿದೆ ಎಂದು ಆರೋಪಿಸಿ "ಸ್ಟಾಪ್ ದಿ ಕೌಂಟ್'' ಎಂದು ಮತ ಎಣಿಕೆ ನಿಲ್ಲಿಸಲು ಹೇಳಿ ಟ್ರಂಪ್ ಮಾಡಿದ ಟ್ವೀಟ್ ಕುರಿತಂತೆ ಪ್ರತಿಕ್ರಿಯಿಸಿರುವ ಗ್ರೆಟಾ ತನ್ಬರ್ಗ್, ಡೊನಾಲ್ಡ್ ಟ್ರಂಪ್ ಅವರು ತಮ್ಮ ಆಕ್ರೋಶವನ್ನು ಹದ್ದು ಬಸ್ತಿನಲ್ಲಿಡಲು ಯತ್ನಿಸಬೇಕು ಹಾಗೂ ನಂತರ ಸ್ನೇಹಿತರೊಬ್ಬರೊಂದಿಗೆ ಓಲ್ಡ್ ಫ್ಯಾಶನ್ಸ್ ಸಿನೆಮಾ ನೋಡಲು ತೆರಳಬೇಕು. ಚಿಲ್, ಡೊನಾಲ್ಡ್ ಚಿಲ್,'' ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಕಳೆದ ವರ್ಷ ಟೈಮ್ ಮ್ಯಾಗಜೀನ್ನ ವರ್ಷದ ವ್ಯಕ್ತಿಯಾಗಿ ಟ್ರಂಪ್ ಆಯ್ಕೆಯಾದಾಗ ಗ್ರೆಟಾ ಕುರಿತು ಇದೇ ರೀತಿಯಾಗಿ ಟ್ರಂಪ್ ಟ್ವೀಟ್ ಮಾಡಿದ್ದು ಇದೀಗ ಇದಕ್ಕೆ ಗ್ರೆಟಾ ತಿರುಗೇಟು ನೀಡಿ ಮಾಡಿರುವ ಟ್ವೀಟ್ ಅನ್ನು 10 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.