ನವದೆಹಲಿ, ನ. 07 (DaijiworldNews/HR): ಜಗತ್ತಿನಾದ್ಯಂತ ಎಲ್ಲರನ್ನು ಭಯಭೀತರನ್ನಾಗಿಸಿದ ಕೊರೊನಾ ವೈರಸ್ ಮುಗಿಯುವ ಮುನ್ನವೇ ಇದೀಗ ಹೊಸದೊಂದು ಸಾಂಕ್ರಾಮಿಕ ಬರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆ ತನ್ನ 73 ನೇ ವಿಶ್ವ ಆರೋಗ್ಯ ಅಸೆಂಬ್ಲಿಯಲ್ಲಿ ಮಾತನಾಡಿದ್ದು, ಮುಂಬರುವು ಸಾಂಕ್ರಾಮಿಕ ರೋಗಕ್ಕೆ ನಾವು ಈಗಿನಿಂದಲೇ ತಯಾರಿ ನಡೆಸುವಂತೆ ವಿಶ್ವದ ನಾಯಕರುಗಳನ್ನು ಕೋರಿದೆ. ಕೊರೊನಾ ತಡೆಗಟ್ಟುವಲ್ಲಿ ಮತ್ತು ನಿವಾರಿಸುವಲ್ಲಿ ತುರ್ತು ಆರೋಗ್ಯ ಮೂಲಸೌಕರ್ಯ ಹೊಂದಿರುವ ದೇಶಗಳು ವೇಗವಾಗಿ ಕಾರ್ಯನಿರ್ವಹಿಸಲು ಸಮರ್ಥವಾಗಿವೆ ಎಂಬುದನ್ನು ನಾವು ಈ ವರ್ಷ ಗಮನಿಸಿದ್ದೇವೆ ಎಂದು ಹೇಳಿದೆ.
ಇನ್ನುಇದೇ ಕೊರೊನಾ ಸೋಂಕನ್ನು ತಡೆಗಟ್ಟುವಲ್ಲಿ ಶ್ರಮಿಸಿದ ದೇಶಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘಿಸಿದ್ದು, ಈ ಎಲ್ಲಾ ದೇಶಗಳು ಇದು ಜಾಗತಿಕ ಬಿಕ್ಕಟ್ಟಾಗಿದ್ದರೂ, ವೈರಸ್ ಹರಡುವಿಕೆಯನ್ನು ಯಶಸ್ವಿಯಾಗಿ ತಡೆಗಟ್ಟಿವೆ. ಲಸಿಕೆ ಖರೀದಿ ತಂತ್ರಗಳನ್ನು ಅಭಿವೃದ್ಧಿಪಡಿಸಲು ಮತ್ತು ಆರೋಗ್ಯ ರಕ್ಷಣೆಯೊಂದಿಗೆ ಇಡೀ ಜಗತ್ತು ಒಟ್ಟಾಗಿ ಕೆಲಸ ಮಾಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.