ವಿಶ್ವಸಂಸ್ಥೆ,ನ. 07 (DaijiworldNews/HR): ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಂಗಸಂಸ್ಥೆಯಾದ ಆಡಳಿತಾತ್ಮಕ ಹಾಗೂ ಹಣಕಾಸು ಪ್ರಶ್ನೆಗಳ ಸಲಹಾ ಸಮಿತಿಗೆ ಭಾರತದ ರಾಜತಾಂತ್ರಿಕ ಅಧಿಕಾರಿ ವಿದಿಶಾ ಮೈತ್ರಾ ಆಯ್ಕೆಯಾಗಿದ್ದಾರೆ.
ಈ ಸಲಹಾ ಸಮಿತಿಗೆ ಆಯ್ಕೆಯಾದ ಮೊದಲ ಭಾರತೀಯ ಪ್ರಜೆ ಮೈತ್ರಾ ಆಗಿದ್ದು, ಅವರು 126 ಮತಗಳನ್ನು ಪಡೆದಿದ್ದಾರೆ.
ಇನ್ನು ಸಲಹಾ ಸಮಿತಿಗೆ ಸದಸ್ಯರನ್ನು 193 ಸದಸ್ಯರನ್ನೊಳಗೊಂಡ ಸಾಮಾನ್ಯ ಸಭೆಯು ನೇಮಕ ಮಾಡುತ್ತದೆ.
ಏಷ್ಯಾ ಪೆಸಿಫಿಕ್ ರಾಷ್ಟ್ರಗಳಿಂದ ಇಬ್ಬರು ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡಲಾಗಿತ್ತು. ಮತ್ತೊಬ್ಬ ಅಭ್ಯರ್ಥಿ ಇರಾಕ್ನ ಆಲಿ ಮೊಹಮ್ಮದ್ ಫೇಕ್ ಆಲ್ ದಬಾಕ್ ಅವರು 64 ಮತಗಳನ್ನು ಪಡೆದಿದ್ದಾರೆ
ಭಾರತವು ಭದ್ರತಾ ಮಂಡಳಿಯಲ್ಲಿ ಕಾಯಂ ಅಲ್ಲದ ಸದಸ್ಯ ದೇಶವಾಗಿ ಎರಡು ವರ್ಷಗಳ ಅವಧಿಗೆ ಆಯ್ಕೆಯಾಗಿರುವ ಬೆನ್ನಲ್ಲೇ ಇದೀಗ ಮೈತ್ರಾ ಅವರು ವಿಶ್ವಸಂಸ್ಥೆಯ ಸಲಹಾ ಸಮಿತಿಗೆ ನೇಮಕವಾಗಿದ್ದಾರೆ.