ಕಾಬೂಲ್, ನ.09 (DaijiworldNews/PY): ಅಫ್ಗಾನಿಸ್ತಾನದ ದಕ್ಷಿಣ ಕಂದಹಾರ್ ಪ್ರಾಂತ್ಯದ ಪೊಲೀಸ್ ನೆಲೆಯನ್ನು ಗುರಿಯಾಗಿಸಿಕೊಂಡು ಕಾರಿನ ಮೂಲಕ ಆತ್ಮಾಹುತಿ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಕನಿಷ್ಠ ನಾಲ್ಕು ಮಂದಿ ಸಾವನ್ನಪ್ಪಿದ್ದು, ಸುಮಾರು 40 ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
"ಪ್ರಾಂತ್ಯದ ಮೈವಾಂಡ್ ಜಿಲ್ಲೆಯಲ್ಲಿ ಭಾನುವಾರ ತಡರಾತ್ರಿ ದಾಳಿ ನಡೆದಿದ್ದು, ಉಗ್ರರು ಕೆಲ ಮನೆಗಳನ್ನು ಸ್ಪೋಟಗೊಳಿದಿದ್ದಾರೆ. ಆರೋಗ್ಯ ಸಿಬ್ಬಂದಿಗಳು ಮನೆಗಳಲ್ಲಿ ಶೋಧ ಕಾರ್ಯಾ ನಡೆಸುತ್ತಿದ್ದಾರೆ" ಎಂದು ಕಂದಾಹಾರ್ನ ಸಾರ್ವಜನಿಕ ಆರೋಗ್ಯ ಇಲಾಖೆಯ ಪ್ರಾಂತೀಯ ನಿರ್ದೇಶಕ ಮೊಹಮ್ಮದ್ ಅಶ್ರಫ್ ನಾಡೆರಿ ಹೇಳಿದ್ದಾರೆ.
"ಗಾಯಗೊಂಡವರ ಪೈಕಿ ಸೈನಿಕರು ಹಾಗೂ ನಾಗರಿಕರು ಸೇರಿದ್ದಾರೆ" ಎಂದು ತಿಳಿಸಿದ್ದಾರೆ.
ಈವರೆಗೆ ಯಾವುದೇ ಸಂಘಟನೆಯ ಈ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಆದರೆ, ಈ ದಾಳಿಯನ್ನು ತಾಲಿಬಾನ್ ಉಗ್ರ ಸಂಘಟನೆಯು ಮಾಡಿರಬಹುದು ಎಂಬ ಶಂಕೆಯಿದೆ.
ಅಮೇರಿಕಾವು 2001ರಲ್ಲಿ ಅಫ್ಗಾನಿಸ್ತಾನದ ಮೇಕೆ ದಾಳಿ ನಡೆಸಿದ ಬಳಿಕ ಕಂದಾಹಾರ್ ಭಯೋತ್ಪಾಧಕ ಸಂಘಟನೆಗಳ ಭದ್ರಕೋಟೆಯಾಗಿದೆ.